ನವದೆಹಲಿ: ಬೀಫ್ ಬಡಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಜಂತರ್ ಮಂತರ್ ಪಕ್ಕದಲ್ಲಿರುವ ಕೇರಳ ಹೌಸ್ ಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಗೋಮಾಂಸ ವಿವಾದಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದಾರೆ.
ಮುಂಜಾನೆ 4.15ರ ವೇಳೆಗೆ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಬಂದಿತ್ತು. ಪೊಲೀಸ್ ಮೂಲಗಳ ಪ್ರಕಾರ ಕರೆ ಮಾಡಿರುವ ವ್ಯಕ್ತಿಯ ಹೆಸರು ವಿಷ್ಣು ಗುಪ್ತಾ. ಈತ ಹಿಂದೂ ಸೇನೆಯ ನಾಯಕನಾಗಿದ್ದಾನೆ. ಕೇರಳ ಹೌಸ್ ನಲ್ಲಿ ಬೀಫ್ ಪದಾರ್ಥ ಮಾಡಲಾಗಿದೆ ಎಂದು ಈತ ದೂರಿದ್ದಾನೆ.
ಈ ಬಗ್ಗೆ ಕೇರಳ ಹೌಸ್‌ನಲ್ಲಿ ವಿಚಾರಿಸಿದಾಗ ತಾವು ಎತ್ತಿನ ಮಾಂಸದ ಪದಾರ್ಥ ಮಾಡುತ್ತಿದ್ದು, ಅದನ್ನು ಮೆನುವಿನಲ್ಲಿ ಬೀಫ್ ಎಂದೇ ಕೊಡಲಾಗಿದೆ. ಇದೀಗ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಮೆನುವಿನಿಂದ ಬೀಫ್ ಕೈ ಬಡಲು ನಾವು ನಿರ್ಧರಿಸಿದ್ದೇವೆ ಎಂದು ಕೇರಳ ಹೌಸ್‌ನವರು ಹೇಳಿದ್ದಾರೆ.