ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಬಂಧನ ಅಥವಾ ಶರಣಾಗತಿಗೆ ಕಾರಣವಾಗಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್. ಹೀಗಂತ ಸರ್ಕಾರದ ಮೂಲಗಳು ಹೇಳಿವೆ.
70 ವರ್ಷದ ದೋವಲ್ ಅವರು ಕೆಲದಿನಗಳಿಂದ ಇಂಡೋನೇಶಿಯಾದ `ಕೆಲವರ' ಜತೆ¸ ಸಂಪರ್ಕದಲ್ಲಿದ್ದು, ಛೋಟಾ ರಾಜನ್ ಬಂಧನಕ್ಕಾಗಿ ಯೋಜನೆ ರೂಪಿಸುತ್ತಿದ್ದರಂತೆ. ಅಲ್ಲದೆ ಛೋಟಾ ರಾಜನ್ ಕೂಡ ಅನಾರೋಗ್ಯದಿಂದಾಗಿ ಬಸವಳಿದಿದ್ದಾನೆ.
ಅಲ್ಲದೆ ವಿರೋಧಿ ಗುಂಪುಗಳು ಈತನ ಹತ್ಯೆಗೆ ಸಂಚು ರೂಪಿಸುತ್ತಿದ್ದರಿಂದ ಆತ ಕೂಡ ತಪ್ಪಿಸಿಕೊಳ್ಳಬೇಕಿತ್ತು. ಹೀಗಾಗಿ ಶರಣಾಗತಿಯ ಮಾರ್ಗ ಹುಡುಕುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ, ಭೂಗತ ದೊರೆ ದಾವೂದ್ ಇಬ್ರಾಹಿಂನ ನೆಲೆ ಮತ್ತು ಆತನ ಅಪರಾಧ ಕೆಲಸಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಛೋಟಾ ರಾಜನ್ ಸಹಾಯ ಬೇಕು.
ಈ ಹಿನ್ನೆಲೆಯಲ್ಲಿಯೇ ದೋವಲ್, ಸರಿಯಾದ ಯೋಜನೆ ರೂಪಿಸಿ ಛೋಟಾ ರಾಜನ್‍ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಕತಾಳೀಯವೆಂಬಂತೆ ಕೆಲ ದಿನಗಳ ಹಿಂದೆ, ಛೋಟಾ ರಾಜನ್‍ಗೆ ಸೇರಿದ ಖುಷಿ ಡೆವಲಪರ್ಸ್ ಮೇಲೆ ಮುಂಬೈ ಕ್ರೈಂಬ್ರಾಂಚ್‍ನ ಅಧಿಕಾರಿಗಳು ದಾಳಿ ಮಾಡಿದ್ದರು.
ಜತೆಗೆ ಛೋಟಾ ರಾಜನ್ ಸಹೋದರ ಮತ್ತು ರಾಜಕಾರಣಿ ದೀಪಕ್ ನಿಖಲ್ಜೆ ಫ್ಲಾಟ್ ಮೇಲೂ ದಾಳಿ ನಡೆದಿತ್ತು. ಅಜಿತ್ ದೋವಲ್, ಈ ಹಿಂದೆ ಗುಪ್ತಚರ ಇಲಾಖೆಯ ನಿರ್ದೇಶಕರಾಗಿದ್ದವರು. ಹೀಗಾಗಿ ಛೋಟಾ ರಾಜನ್ ನ ಇರುವಿಕೆ ಮತ್ತು ಆತನ ಪಾತಕಗಳ ಬಗ್ಗೆ ತಿಳಿದುಕೊಂಡಿದ್ದರು.
2008ರಲ್ಲಿ ದೋವಲ್, ದಾವೂದ್ ಇಬ್ರಾಹಿಂ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ಯೋಜನೆಯೊಂದನ್ನು ತಯಾರಿಸಿದ್ದರು.
ಇದೊಂದು ಐತಿಹಾಸಿಕಗಳಿಗೆ: ಛೋಟಾ ರಾಜನ್ ಬಂಧನ ಭಾರತದ ಪಾಲಿಗೆ ಐತಿಹಾಸಿಕ ಗಳಿಗೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳು ಬಣ್ಣಿಸಿದ್ದಾರೆ.