ಗೋಮಾಂಸ ಮಾತ್ರ ವಿವಾದ ಯಾಕೆ? ಶೂ, ಕ್ರಿಕೆಟ್ ಬಾಲ್‌ಗೂ ಬೇಕು ಗೋವಿನ ಚರ್ಮ!

ಗೋಮಾಂಸದ ಹೊರತಾಗಿ ಗೋವಿನ ಚರ್ಮ, ಕೊಬ್ಬು, ಎಲುಬು ಹೀಗೆ ಬೇರೆ ಬೇರೆ ಅಂಗಾಂಗಗಳು ಎಲ್ಲೆಲ್ಲಾ ಬಳಕೆಯಾಗುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ?
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಗೋಮಾಂಸದ ಬಗ್ಗೆ  ವಿವಾದ, ಸಂಘರ್ಷ, ಪ್ರತಿಭಟನೆಗಳು ನಮ್ಮ ದೇಶದಲ್ಲಿ ಕಾವೇರುತ್ತಲೇ ಇದೆ. 'ಗೋವು' ಇದರ ಮಾಂಸವಷ್ಟೇ ಈಗ ಸುದ್ದಿಯಲ್ಲಿದೆ. ಆದರೆ ಗೋಮಾಂಸದ ಹೊರತಾಗಿ ಗೋವಿನ ಚರ್ಮ, ಕೊಬ್ಬು, ಎಲುಬು ಹೀಗೆ ಬೇರೆ ಬೇರೆ ಅಂಗಾಂಗಗಳು ಎಲ್ಲೆಲ್ಲಾ ಬಳಕೆಯಾಗುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ? 
ಚರ್ಮದ ಶೂ, ಬೆಲ್ಟ್ ಮತ್ತು ಬ್ಯಾಗ್
 ಚರ್ಮದ ಶೂ, ಬೆಲ್ಟ್ ಮತ್ತು ಬ್ಯಾಗ್ - ಈ ವಸ್ತುಗಳನ್ನು ತಯಾರಿಸಲು ಗೋವಿನ ಚರ್ಮವನ್ನೇ ಬಳಸಲಾಗುತ್ತದೆ. ಶೂ ಮತ್ತು ಜಾಕೆಟ್‌ಗಳಲ್ಲಿ ಬಳಸುವ ದಪ್ಪ ಲೆದರ್ ಅಂತೀವಲ್ಲಾ..ಅದು ಗೋವಿನ ಚರ್ಮವೇ!
ಸಕ್ಕರೆ ಮತ್ತು ಪಿಂಗಾಣಿ ಪಾತ್ರೆ
ನಾವು ಬಳಸುವ ಸಕ್ಕರೆ ಇದೆಯಲ್ಲಾ ಅದು ಸಂಸ್ಕರಣೆಗೊಂಡು ಬಂದಾಗ ಅಷ್ಟೊಂದು ಬೆಳ್ಳಗೆ ಇರಲ್ಲ. ಸಕ್ಕರೆಯನ್ನು ಬೆಳ್ಳಗೆ ಮಾಡುವುದೇ ಬೋನ್ ಚಾರ್! ಗೋವಿನ ಎಲುಬಿನಿಂದ ಮಾಡಿದ್ದೇ ಬೋನ್ ಚಾರ್. ಸಕ್ಕರೆ ಸಂಸ್ಕರಣೆ ವೇಳೆ  ಈ ಬೋನ್ ಚಾರ್‌ನ್ನು ಡಿಕಲರೈಸಿಂಗ್ ಫಿಲ್ಟರ್ ಆಗಿ ಬಳಸಲಗುತ್ತದೆ. ಪಿಂಗಾಣಿ ಪಾತ್ರೆಗಳಲ್ಲಿಯೂ ಈ  ಬೋನ್ ಚಾರ್ ಬಳಸಲಾಗುತ್ತದೆ. ಜಗತ್ತಿನಲ್ಲಿ ಅತೀ ಹೆಚ್ಚು ಬೋನ್ ಚಾರ್ ನಿರ್ಮಿಸುವ ಮತ್ತು ರಫ್ತು ಮಾಡುವ ದೇಶ ಯಾವುದು ಗೊತ್ತಾ? ಭಾರತ!. 
ಟಯರ್‌ಗಳು
ಸೋಪು, ಕಾಸ್ಮೆಟಿಕ್, ಡಿಟರ್ಜೆಂಟ್, ಲ್ಯುಬ್ರಿಕೆಂಟ್ ಮತ್ತು ಟಯರ್ ಗಳಲ್ಲಿ ಸ್ಟೆಯಾರಿಕ್ ಆ್ಯಸಿಡ್ ಗಳನ್ನು ಬಳಸಲಾಗುತ್ತದೆ. ಸ್ಟೆಯಾರಿಕ್ ಆ್ಯಸಿಡ್‌ನ್ನು ಗೋವಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ.
ಸಂಗೀತೋಪಕರಣಗಳು
ವಯೋಲಿನ್, ಪಿಯಾನೋಗಳನ್ನು ತಯಾರಿಸುವಾಗ ಬಳಸುವ ಅಂಟು ಹೋರಿಗಳ ಟಿಶ್ಯೂಗಳಿಂದ (ಜೀವ ಕೋಶ) ಮಾಡಲ್ಪಟ್ಟದ್ದಾಗಿದೆ. ತಬಲಾ ಮತ್ತು ಮೃದಂಗದಲ್ಲಿ ಬಳಸುವ ಚರ್ಮ ಕೂಡಾ ಹಸುವಿನದ್ದೇ.
ಕ್ರಿಕೆಟ್ ಬಾಲ್ 
ನಮ್ಮ ದೇಶದಲ್ಲಿ ಕ್ರಿಕೆಟ್ ಎಂಬುದು ಕೂಡಾ ಒಂದು ಧರ್ಮ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.  ಕ್ರಿಕೆಟ್ ಅಂದರೆ ಜಂಟಲ್ ಮ್ಯಾನ್‌ಗಳ ಆಟ.  ಆದರೆ ಈ ಕ್ರಿಕೆಟ್ ಆಟಕ್ಕೆ ಬಳಸಲ್ಪಡುವ ಬಾಲ್ ತಯಾರಿಕೆಗೂ ಹಸುವಿನ ಚರ್ಮ ಬೇಕೇ ಬೇಕು.
ಕ್ರಿಕೆಟ್ ಬಾಲ್ ತಯಾರಿಕೆಗೆ ಎಳೆ ಕರುವಿನ ಚರ್ಮ ಬಳಸಲಾಗುತ್ತದೆ. ಆದ್ದರಿಂದ ಇಂಥಾ ಬಾಲ್‌ಗಳಿಗೆ ನಿಷೇಧ ಹೇರಬೇಕು. ಇದರ ಬದಲು ಸಿಂಥೆಟಿಕ್ ಬಾಲ್ ಬಳಸಿ ಎಂದು ಪೇಟಾ (ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆ) ದನಿಯೆತ್ತಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
(ಸಂಗ್ರಹ ಮಾಹಿತಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com