ಪಟಾಕಿ ನಿಷೇಧ ಸಾಧ್ಯವಿಲ್ಲ, ಜಾಗೃತಿ ಅಭಿಯಾನಕ್ಕೆ ಕೇಂದ್ರಕ್ಕೆ ಸುಪ್ರಿಂ ಸೂಚನೆ

ದೀಪಾವಳಿ ಹಬ್ಬದಲ್ಲಿ ಹಚ್ಚುವ ಪಟಾಕಿ ನಿಷೇಧಿಸಲು ಸುಪ್ರಿಂ ಕೋರ್ಟ್ ಹಿಂದೇಟು ಹಾಕಿದೆ.ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ ಪಟಾಕಿ ಬಗ್ಗೆ ಜಾಗೃತಿ ಅಭಿಯಾನ ಆಯೋಜಿಸುವಂತೆ ಕೇಂದ್ರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದಲ್ಲಿ ಹಚ್ಚುವ ಪಟಾಕಿ ನಿಷೇಧಿಸಲು ಸುಪ್ರಿಂ ಕೋರ್ಟ್ ಹಿಂದೇಟು ಹಾಕಿದೆ.

ಹೆಚ್ಚುತ್ತಿರುವ ಮಾಲಿನ್ಯತೆ ಕಡಿಮೆ ಮಾಡಲು ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ  ಪಟಾಕಿ ಬಗ್ಗೆ ಜಾಗೃತಿ ಅಭಿಯಾನ ಆಯೋಜಿಸುವಂತೆ ಕೇಂದ್ರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.

ಪಟಾಕಿ ನಿಷೇಧ ಕುರಿತಂತೆ ಮೂರು ಮಕ್ಕಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಪಟಾಕಿ ನಿಷೇಧಕ್ಕೆ ಹಿಂದೇಟು ಹಾಕಿದೆ. ಇನ್ನು ಪಟಾಕಿ ಹಚ್ಚುವ ಸಮಯ ನಿಗದಿ ಸಂಬಂದ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮಾತ್ರ ಹಚ್ಚುವಂತೆ 2001 ರಲ್ಲಿ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com