ಗೋದ್ರಾ ರೈಲು ದುರಂತ ಪ್ರಕರಣ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಗೋದ್ರಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು...
ಗೋದ್ರಾ ರೈಲು ದುರಂತ
ಗೋದ್ರಾ ರೈಲು ದುರಂತ
Updated on
ಅಹ್ಮದಾಬಾದ್: ಗೋದ್ರಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಫಾರೂಕ್ ದಾಂತಿಯ ಬಂಧಿತ ಆರೋಪಿ. ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಸಬರ್ ಮತಿ ಎಕ್ಸ್ ಪ್ರೆಸ್ ರೈಲಿಗೆ ಫಾರೂಕ್ ದಾಂತಿಯ ಮತ್ತು ಆತನ ಸಹಚರರು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ರೈಲಿಗೆ ಬೆಂಕಿ ಹಚ್ಚಿದ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ಗಲಭೆ ನಡೆದಿತ್ತು. 
ಬೆಂಕಿ ಹಚ್ಚಿ ಪರಾರಿಯಾಗಿದ್ದ ಈತ 2 ಲಕ್ಷ ಜನಸಂಖ್ಯೆ ಇರುವ ಗೋದ್ರಾದಲ್ಲೇ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಷ್ಟೇ ಅಲ್ಲದೇ, ಈತ ತನ್ನ ಹೆಸರು ಮತ್ತು ಮುಖ ಲಕ್ಷಣವನ್ನು ಬದಲಾಯಿಸುತ್ತಾ ಬಚ್ಚಿಟ್ಟುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com