ಹರ್ಯಾಣ: ಬೀಫ್ ವಿಚಾರದಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ, ಗೋಮಾಂಸ, ಕರು ಮಾಂಸಗಳ ಸೇವನೆಯಿಂದ ಮಾನವದೇಹದಲ್ಲಿ ಕಬ್ಬಿಣಾಂಶ ಹೀರುವ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಲೇಖನ ಪ್ರಕಟಿಸಿದ್ದ ಶಿಕ್ಷಾ ಸಾರ್ಥಿ ಮ್ಯಾಗಜೀನ್ ಸಂಪಾದಕಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಹರ್ಯಾಣದ ಶಿಕ್ಷಣ ಇಲಾಖೆಯ ಸೊಸೈಟಿಯೊಂದರ ಮ್ಯಾಗಜೀನ್ ನಲ್ಲಿ ಗೋಮಾಂಸ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಲೇಖನ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಗಜೀನ್ ನ ಸಂಪಾದಕಿ ದೇವಯಾನಿ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ. ಸಂಪಾದಕರನ್ನು ವಜಾಗೊಳಿಸಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಹರ್ಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್, ಹರ್ಯಾಣ ಮ್ಯಾಗಜೀನ್ ನಲ್ಲಿ ಈ ರೀತಿಯ ಲೇಖನಗಳು ಪ್ರಕಟವಾಗಬಾರದಿತ್ತು. ಆದರೆ ವೈಜ್ಞಾನಿಕ ಆಧಾರಗಳನ್ನಿಟ್ಟುಕೊಂಡು ಗೋಮಾಂಸ ಸೇವನೆಯಿಂದಾಗುವ ಪ್ರಯೋಜನಗಳನ್ನು ವಿಶ್ಲೇಶಿಸಲಾಗಿತ್ತು ಎಂದು ಸಂಪಾದಕರು ಸಮರ್ಥನೆ ನೀಡಿದ್ದಾರೆ. ಸಂಪಾದಕ ಹುದ್ದೆಯಿಂದ ದೇವಯಾನಿ ಸಿಂಗ್ ಅವರನ್ನು ವಜಾಗೊಳಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ರಾಮ್ ಬಿಲಾಸ್ ಎಂದು ಹೇಳಿದ್ದಾರೆ.
ಭಾರತದಲ್ಲಿ ಗೋವಿನ ಬಗ್ಗೆ ಪೂಜನೀಯ ಭಾವನೆಯಿದೆ. ಹರ್ಯಾಣ ಗೋಹತ್ಯೆಗೆ ಸಂಬಂಧಿಸಿದಂತೆ ಕಠಿಣ ಕಾನೂನು ಪಾಲಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಬೀಫ್ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಸುಮಾರು 48 ಪುಟಗಳ
ಮಾಹಿತಿಯನ್ನೊಳಗೊಂಡ ಸುದೀರ್ಘ ಲೇಖನ ಪ್ರಕಟವಾಗಿದೆ. ಗೋಮಾಂಸ ಸೇವನೆ ಮಾಡುವುದಕ್ಕೆ ಕೆಲ ದಿನಗಳ ಹಿಂದೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Advertisement