ಮೋದಿಯಿಂದ ತಿಂಗಳಿಗೊಮ್ಮೆ ಸ್ಥಗಿತಗೊಂಡ ಯೋಜನೆಗಳ ಪರಿಶೀಲನೆ

ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬಿಲಿಯನ್ ಡಾಲರ್ ಮೊತ್ತದ ಹತ್ತಾರು ಸಾರ್ವಜನಿಕ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬಿಲಿಯನ್ ಡಾಲರ್ ಮೊತ್ತದ ಹತ್ತಾರು ಸಾರ್ವಜನಿಕ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಂಬಂಧ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆದು, ಪರಿಶೀಲನೆ ನಡೆಸುತ್ತಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಪ್ರಧಾನಿ ಮೋದಿ ಅವರು ತಿಂಗಳಲ್ಲಿ ಒಂದು ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ಕರೆದು, ಯೋಜನೆ ಸ್ಥಗಿತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುತ್ತಿದ್ದಾರೆ. ಮೋದಿಯ ಈ ಕ್ರಮದಿಂದಾಗಿ ಕಳೆದ ಮಾರ್ಚ್‌ನಿಂದ ಇದುವರೆಗೆ 60 ಬಿಲಿಯನ್ ಡಾಲರ್ ಮೊತ್ತದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಚಾಲನೆ ದೊರೆತಿದೆ.

ರಸ್ತೆ, ಬಂದರು, ರೈಲು, ವಿದ್ಯುತ್ ಹಾಗೂ ಇತರೆ ಕ್ಷೇತ್ರದಲ್ಲಿ ಬಾಳಿ ಉಳಿದಿದ್ದ 150 ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳಿಗೆ ಮರು ಜೀವ ನೀಡುವ ಮೂಲಕ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಇದನ್ನು ಒಪ್ಪದ ವಿರೋಧಿಗಳು, ವಾಸ್ತವವಾಗಿ ಇದು ಅವರ ವೈಯಕ್ತಿಕ ಮಧ್ಯಸ್ಥಿಕೆಯ ಅಗತ್ಯತೆಯನ್ನು ಮತ್ತು ಸರ್ಕಾರದ ಜಡತ್ವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

'ಇದೊಂದು ವ್ಯವಸ್ಥಿತ ಸಮಸ್ಯೆಯಾಗಿದ್ದು, ಪ್ರಧಾನಿ ಮೋದಿ ಅವರು ಕೆಲಸ ಮಾಡುವ ಅಗತ್ಯ ಇದೆ' ಎಂದು ಹಿಂದಿನ ಕಾಂಗ್ರೆಸ್ ಸರ್ಕಾರದ ಸದಸ್ಯ ಹಾಗೂ ನಿರ್ವಹಣಾ ಸಲಹೆಗಾರ ಅರುಣ್ ಮೈರಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com