ಶ್ರೀಪ್ರಕಾಶ್ ಜೈಸ್ವಾಲ್
ದೇಶ
ಕೋಮುವಾದವೆಂಬ ಆಯುಧವನ್ನು ಬಿಜೆಪಿ ಬಳಸುತ್ತಿದೆ: ಶ್ರೀಪ್ರಕಾಶ್ ಜೈಸ್ವಾಲ್
ಕೋಮುವಾದ ಎಂಬ ಆಯುಧವನ್ನು ಬಿಜೆಪಿ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶ್ರೀಪ್ರಕಾಶ್ ಜೈಸ್ವಾಲ್...
ಲಖನೌ: ಕೋಮುವಾದ ಎಂಬ ಆಯುಧವನ್ನು ಬಿಜೆಪಿ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶ್ರೀಪ್ರಕಾಶ್ ಜೈಸ್ವಾಲ್ ಶನಿವಾರ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಮಹಾ ಮೈತ್ರಿ ಈ ಗೆದ್ದರೇ, ಅದರ ಸಂಭ್ರಮಾಚರಣೆ ಪಾಕಿಸ್ತಾನದಲ್ಲಿ ಮಾಡಲಾಗುತ್ತದೆ ಎಂದು ಅಮಿತ್ ಶಾ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಜೈಸ್ವಾಲ್, ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಅಂಚಿನಲ್ಲಿರುವ ಬಿಜೆಪಿ ಕೋಮುವಾಧ ಎಂಬ ಆಯುಧವನ್ನು ಬಳಕೆ ಮಾಡುತ್ತಿದೆ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿರದ ಕೋಮುವಾದವನ್ನು ಬಿಜೆಪಿ ಬಿತ್ತುತ್ತಿದೆ. ಸೋಲುತ್ತೇವೆ ಎಂಬುದು ಖಚಿತವಾಗುತ್ತಿದ್ದಂತೆ, ಬಿಜೆಪಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದೆ ಕೋಮುವಾದ ಎಂಬ ಆಯುಧ ಬಳಕೆ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇಂದಿರಾಗಾಂಧಿ ಅವರ 31 ನೇ ಪುಣ್ಯತಿಥಿ ಅಂಗವಾಗಿ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ರ್ಯಾಲಿಯಲ್ಲಿ ಕೋಮುವಾಧ ಆಯುಧ ಬಳಕೆ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

