ಸುಪ್ರಿಂ ಕೋರ್ಟ್
ದೇಶ
ಸರ್ದಾರ್ ಜಿ ಜೋಕ್ಸ್ ಗಳಿಗೆ ನಿಷೇಧ ಹೇರಲು ಸುಪ್ರಿಂ ಚಿಂತನೆ
ಸಿಖ್ ಸಮುದಾಯವನ್ನು ಅಪಹಾಸ್ಯ ಮಾಡುತ್ತಿರುವ ಸರ್ದಾರ್ ಜಿ ಜೋಕ್ಸ್ ಗಳನ್ನು ನಿಷೇಧಿಸಲು ಸುಪ್ರಿಂಕೋರ್ಟ್ ಚಿಂತನೆ ನಡೆಸುತ್ತಿದೆ
ನವದೆಹಲಿ: ಸಿಖ್ ಸಮುದಾಯವನ್ನು ಅಪಹಾಸ್ಯ ಮಾಡುತ್ತಿರುವ ಸರ್ದಾರ್ ಜಿ ಜೋಕ್ಸ್ ಗಳನ್ನು ನಿಷೇಧಿಸಲು ಸುಪ್ರಿಂಕೋರ್ಟ್ ಚಿಂತನೆ ನಡೆಸುತ್ತಿದೆ
ಸಂತಾ ಬಂತಾ ಜೋಕ್ಸ್ ಗಳಿಂದ ಸಿಖ್ ಸಮುದಾಯವನ್ನು ಅಪಹಾಸ್ಯ ಮಾಡಿ, ಅವಮಾನ ಮಾಡಲಾಗುತ್ತಿದೆ. ಇದರಿಂದ ಸಿಖ್ ಜನರ ಭಾವನೆಗಳಿಗೆ ನೋವಾಗುತ್ತಿದೆ. ಸುಮಾರು 5 ಸಾವಿರ ವೆಬ್ ಸೈಟ್ ಗಳಲ್ಲಿ ಕೀಳು ಜೋಕ್ಸ್ ಗಳನ್ನು ಅಪ್ ಲೋಡ್ ಮಾಡಲಾಗುತ್ತಿದೆ. ಹೀಗಾಗಿ ಇಂಥ ಜೋಕ್ಸ್ ಗಳನ್ನು ನಿಷೇಧಿಸಬೇಕೆಂದು ಹಾರ್ವಿಂದರ್ ಚೌಧುರಿ ಎಂಬುವರು ಸುಪ್ರಿಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ತಮಾಷೆಗಾಗಿ ಸಮಾಜದ ಒಂದು ವರ್ಗವನ್ನು ಕೀಳಾಗಿ ಚಿತ್ರಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ವಿಷಯದ ಕುರಿತು ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ