ಶೀನಾ ಕೊಲೆ ಪ್ರಕರಣ: ಕಡೆಗೂ ತಪ್ಪೊಪ್ಪಿಕೊಂಡ ಇಂದ್ರಾಣಿ ಮುಖರ್ಜಿ

ತನ್ನ ಮಗಳು ಬದುಕ್ಕಿದ್ದಾಳೆ ಎಂದು ವಾದಿಸುತ್ತಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ 9ಎಕ್ಸ್ ಮಾಧ್ಯಮ ಸಮೂಹದ ಸಹಸಂಸ್ಥಾಪಕಿ...
ಶೀನಾ ಬೋರಾ - ಇಂದ್ರಾಣಿ ಮುಖರ್ಜಿ
ಶೀನಾ ಬೋರಾ - ಇಂದ್ರಾಣಿ ಮುಖರ್ಜಿ
Updated on

ಮುಂಬೈ: ತನ್ನ ಮಗಳು ಬದುಕ್ಕಿದ್ದಾಳೆ ಎಂದು ವಾದಿಸುತ್ತಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ 9ಎಕ್ಸ್ ಮಾಧ್ಯಮ ಸಮೂಹದ ಸಹಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಕಡೆಗೂ ತಪ್ಪೊಪ್ಪಿಕೊಂಡಿದ್ದಾಳೆ.

24 ವರ್ಷದ ಶೀನಾ ಬೋರಾ ಕೊಲೆ ಪ್ರಕರಣದ ಇತರೆ ಆರೋಪಿಗಳಾದ ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಚಾಲಕ ಶ್ಯಾಮ್ ಮನೋಹರ್ ರಾಯ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದು, ಇದೀಗ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸ್ ವಿಚಾರಣೆ ವೇಳೆ ಕಣ್ಣೀರಿಟ್ಟ ಇಂದ್ರಾಣಿ, ತನ್ನ ಮಗಳನ್ನು ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ ಕೊಲೆಗೆ ಕಾರಣ ಮಾತ್ರ ಇನ್ನು ಬಾಯ್ಬಿಟ್ಟಿಲ್ಲ.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ, ನನ್ನ ಮಗಳು ಶೀನಾ ಸತ್ತಿಲ್ಲ. ಆಕೆ ಬದುಕಿದ್ದು, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ವಾದಿಸಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com