
ಒಡಿಸ್ಸಾ(ಕಟಕ್): ಒಡಿಸ್ಸಾದ ಕಟಕ್ ನ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಲ್ಲಿ 61 ಶಿಶುಗಳು ದಾರುಣವಾಗಿ ಸಾವನ್ನಪ್ಪಿವೆ.
ಆಸ್ಪತ್ರೆಯಲ್ಲಿ ಸಹುಗೂಸುಗಳ ನಿಗೂಡ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಒತ್ತಾಯಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಮುಂದುವರಿದಿವೆ. ಇನ್ನು ಶಿಶುಗಳ ಸಾವಿಗೆ ಕಾರಣರೆಂದು ಹೇಳಲಾಗುತ್ತಿರುವ ಶಿಶುಭವನದ ಮೂವರು ಸಿಬ್ಬಂದಿ ವಿರುದ್ಧ ಈಗಾಗಲೇ ಕ್ರಿಮಿನಲ್ ತನಿಖೆ ಆರಂಭವಾಗಿದೆ ಎಂದು ಒಡಿಸ್ಸಾ ಆರೋಗ್ಯ ಸಚಿವ ಅಟನು ಎಸ್ ನಾಯಕ್ ತಿಳಿಸಿದ್ದಾರೆ.
ಸಿಬ್ಬಂದಿಯ ಉದಾನಸೀನತೆ ಹಾಗೂ ನಿರ್ಲಕ್ಷ್ಯದಿಂದ 61 ಶಿಶುಗಳು ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಆರೋಗ್ಯ ಸಚಿವ ಅತುಣ ಎಸ್. ನಾಯಕ್ ತಿಳಿಸಿದ್ದಾರೆ.
ಇನ್ನು ಈ ಪ್ರಕರಣ ಸಂಬಂಧ ಬಿಜೆಪಿ ಒಡಿಸ್ಸಾದ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದರೂ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದೂವರೆಗೂ ಒಮ್ಮೆಯೂ ಆಸ್ಪತ್ರೆಗೆ ಭೇಟಿ ನೀಡದ್ದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದೆ.
ಇನ್ನೂ ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯವಾದ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆಯಿದೆ, ಅತಿ ಹೆಚ್ಚು ಅನಾನುಕೂಲ ವಾಗುತ್ತಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಸಮೀರ್ ಮೊಹಾಂತಿ ತಿಳಿಸಿದ್ದಾರೆ.
Advertisement