ಕಲ್ಲಿದ್ದಲು ಹಗರಣ: ಮನಮೋಹನ್‍ಸಿಂಗ್‍ಗೆ ಮಾಹಿತಿ ಇತ್ತು- ಜಾರ್ಖಂಡ್ ಮಾಜಿ ಸಿಎಂ

ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್ ಒಡೆತನದ ಕಲ್ಲಿದ್ದಲು ಕಂಪನಿಗೆ ಬ್ಲಾಕ್‍ಗಳನ್ನು ಹರಾಜು ಮಾಡುವ ಬೆಳವಣಿಗೆ...
ಮನಮೋಹನ್ ಸಿಂಗ್
ಮನಮೋಹನ್ ಸಿಂಗ್
Updated on

ನವದೆಹಲಿ: ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್ ಒಡೆತನದ ಕಲ್ಲಿದ್ದಲು ಕಂಪನಿಗೆ ಬ್ಲಾಕ್‍ಗಳನ್ನು ಹರಾಜು ಮಾಡುವ ಬೆಳವಣಿಗೆ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಹಿತಿ ಇತ್ತು. ಹೀಗಾಗಿ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ ತಿಳಿಸಿದ್ದಾರೆ.

ಕಲ್ಲಿದ್ದಲು ಖಾತೆ ಮಾಜಿ ಸಚಿವ ದಾಸರಿ ನಾರಾಯಣರಾವ್ ಕೂಡ ಜಿಂದಾಲ್ ಗುಂಪಿಗೆ ಬ್ಲಾಕ್ ಹಂಚಿಕೆ ಮಾಡುವ ಇರಾದೆ ಯಲ್ಲಿದ್ದರು ಎಂದಿದ್ದಾರೆ.

ಸಿಬಿಐನ ವಿಶೇಷ ಕೋರ್ಟಲ್ಲಿ ವಿಚಾರಣೆ ವೇಳೆ ಈ ಮಾಹಿತಿ ನೀಡಿ ದ್ದಾರೆ. ಹೀಗಾಗಿ ಹಿನ್ನೆಲೆ ಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಸಿಂಗ್‍ರನ್ನು ಮತ್ತೆ ವಿಚಾರಣೆಗೆ ಕರೆಯ ಬೇಕೇ ಬೇಡವೆ ಎಂಬ ಬಗ್ಗೆ ಗುರುವಾರ ತಿಳಿಸುವುದಾಗಿ ಕೋರ್ಟ್ ಗೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com