ಚರ್ಚೆಗಳಿಂದ ಎಲ್ಲಾ ಸಮಸ್ಯೆಗೂ ಪರಿಹಾರ ಸಾಧ್ಯ: ಪ್ರಧಾನಿ ಮೋದಿ

ಪ್ರಪಂಚದಲ್ಲಿ ಸೃಷ್ಠಿಯಾಗುತ್ತಿರುವ ಹಿಂಸೆಯ ವಿರುದ್ಧ ಶಾಂತಿ ಎಂಬ ಮಂತ್ರ ಪಠಿಸಬೇಕಿದ್ದು, ಚರ್ಚೆಗಳಿಂದ ಎಲ್ಲಾ ಸಮಸ್ಯೆಗಳಿಗು ಪರಿಹಾರವಿದೆ ಎಂದು ನನಗೆ ದೃಢ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ...
ಗ್ಲೋಬಲ್ ಹಿಂದು ಬುದ್ದಿಸ್ಟ್ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡುತ್ತಿರುವುದು (ಫೋಟೋ ಕೃಪೆ: ಎಎನ್ಐ)
ಗ್ಲೋಬಲ್ ಹಿಂದು ಬುದ್ದಿಸ್ಟ್ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡುತ್ತಿರುವುದು (ಫೋಟೋ ಕೃಪೆ: ಎಎನ್ಐ)

ನವದೆಹಲಿ: ಪ್ರಪಂಚದಲ್ಲಿ ಸೃಷ್ಠಿಯಾಗುತ್ತಿರುವ ಹಿಂಸೆಯ ವಿರುದ್ಧ ಶಾಂತಿ ಎಂಬ ಮಂತ್ರ ಪಠಿಸಬೇಕಿದ್ದು, ಚರ್ಚೆಗಳಿಂದ ಎಲ್ಲಾ ಸಮಸ್ಯೆಗಳಿಗು ಪರಿಹಾರವಿದೆ ಎಂದು ನನಗೆ ದೃಢ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಹಿಂದು ಬುದ್ದಿಸ್ಟ್ ಕಾನ್ ಕ್ಲೇವ್ ಸಭೆಯಲ್ಲಿ ಮಾತನಾಡಿರುವ ಅವರು, ಬುದ್ಧನ ಆದರ್ಶಗಳು ಹಾಗೂ ಅವರು ನಡೆಯುತ್ತಿದ್ದ ಹಾದಿಯನ್ನು ನೋಡಿದರೆ ಈ ಶತಮಾನವನ್ನು ಏಷ್ಯನ್ ಶತಮಾನವೆಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ರೀತಿಯ ಸಭೆಗಳಿಗೆ ನನ್ನನ್ನು ಆಹ್ವಾನಿಸಿದ್ದು ನನ್ನ ಅದೃಷ್ಟ. ನಮ್ಮ ನಾಡಿನ ಗೌತಮ ಬುದ್ಧ ಬೌದ್ಧ ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಿದ. ಇದು ಭಾರತೀಯರು ಹೆಮ್ಮೆ ಪಡುವಂತಹ ಸಂಗತಿ. ಬುದ್ಧನ ಜೀವನ ಸೇವೆ, ತ್ಯಾಗ ಮತ್ತು ಸಹಾನುಭೂತಿಯ ಶಕ್ತಿಯನ್ನು ಸಾರಿದೆ. ಬುದ್ಧನ ತತ್ವಗಳನ್ನು ಪ್ರತಿಯೊಬ್ಬರು ಪರಿಪಾಲಿಸಬೇಕಿದ್ದು, ಚರ್ಚೆಗಳಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿರುವುದೆ ಎಂಬುದರ ಬಗ್ಗೆ ನನಗೆ ಧೃಢ ನಂಬಿಕೆ ಇದೆ.

ಬೌದ್ಧ ಧರ್ಮ ಹಾಗೂ ಹವಾಮಾನಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿದ್ದು, ಬೌದ್ಧರ ದೃಷ್ಠಿಕೋನದ ಪ್ರಕಾರ ಯಾವುದೂ ಪ್ರತ್ಯೇಕತೆಯನ್ನು ಹೊಂದಿರುವುದಿಲ್ಲ. ಆಸ್ತಿ ಮಾಡುವುದು, ಸಂಪತ್ತು ಗಳಿಸುವುದು ಕೇವಲ ಜೀವನ ಏಕಮಾತ್ರ ಉದ್ದೇಶಕ್ಕಲ್ಲ ಎಂಬುದನ್ನು ಬುದ್ಧ ಸಾರಿದ್ದಾನೆ. ಹವಾಮಾನ ವೈಪರೀತ್ಯ ಈಗಿನ ದೊಡ್ಡ ಸವಾಲಾಗಿದ್ದು, ಈ ಬಗ್ಗೆ ನಾನು ಬರೆದ ಪುಸ್ತಕವೊಂದನ್ನು ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರೇ  ಬಿಡುಗಡೆ ಮಾಡಿದ್ದರು ಎಂದು ಇದೇ ವೇಳೆ ಸ್ಮರಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com