
ನವದೆಹಲಿ: ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಮಾಮೂಲಿ. ಅದಕ್ಕೆ ಈಗ ಹೊಸ ಸೇರ್ಪಡೆ ಎಡಪಕ್ಷದ ನಾಯಕ ಅತುಲ್ ಕುಮಾರ್ ಅಂಜನ್.
ಮಾದಕ ನಟಿ ಸನ್ನಿ ಲಿಯೋನ್ ಳ ಕಾಂಡೋಮ್ ಜಾಹಿರಾತಿನಿಂದ ಭಾರತದಲ್ಲಿ ಅತ್ಯಾತಾರ ಸಂಖ್ಯೆ ಜಾಸ್ತಿಯಾಗಲಿದೆ ಎಂದು ಇವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
"ಸನ್ನಿ ಲಿಯೋನ್ ಎಂಬ ಹೆಸರಿನ ಮಹಿಳೆಯಿದ್ದಾಳೆ. ಅವಳು ವಯಸ್ಕರಿಗೆ ಸಂಬಂಧಪಟ್ಟ ನಗ್ನ ಚಿತ್ರದ ನಾಯಕಿ'' ಎಂದು ಉತ್ತರ ಪ್ರದೇಶದ ಗಾಜಿಪುರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಭಾರತೀಯ ಕಮ್ಯುನಿಸ್ಟ್ ಪಕ್ಷದ ಈ ನಾಯಕ ಹೇಳಿದ್ದಾರೆ.ಅವರು ನಗ್ನ ಚಿತ್ರದ ಬಗ್ಗೆ ರ್ಯಾಲಿಯಲ್ಲಿ ಮಾತನಾಡಿರುವುದು ಅಶ್ಲೀಲಕರವಾಗಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದರಿಂದ ಮತ್ತು ಆ ಜಾಹೀರಾತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರೆ ಜನರು ತಪ್ಪು ದಾರಿಗಿಳಿಯುತ್ತಾರೆ. ಅತ್ಯಾಚಾರಕ್ಕೆ ಈ ಜಾಹಿರಾತು ಎಡೆಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
''ತಾವು ಈ ಹಿಂದೆ ಒಂದೇ ಒಂದು ಸಲವೂ ಪೋರ್ನ್ ಸಿನಿಮಾಗಳನ್ನು ವೀಕ್ಷಿಸಿರಲಿಲ್ಲ. ಆದರೆ ಇತ್ತೀಚೆಗೆ ಒಂದು ಪೋರ್ನ್ ಸಿನಿಮಾ ನೋಡಿದಾಗ, ಕೇವಲ ಎರಡು ನಿಮಿಷದಲ್ಲಿಯೇ ವಾಂತಿ ಬರುವಂತಾಯಿತು. ಅಷ್ಟು ಕೆಟ್ಟದಾಗಿತ್ತು ಎಂದು ಹೇಳಿದರು.
ಇತ್ತೀಚೆಗೆ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್, ಒಬ್ಬ ಹುಡುಗಿ ಮೇಲೆ ನಾಲ್ವರು ಹುಡುಗಿಯರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ, ಅತ್ಯಾಚಾರಕ್ಕೆ ಹುಡುಗಿಯರೇ ಕಾರಣ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ಇತ್ತೀಚೆಗೆ ಸಂಸತ್ತಿನಲ್ಲಿ ಮಹಿಳೆಯರ ಭದ್ರತೆ ಕುರಿತು ಚರ್ಚಿಸುವಾಗ ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್, 'ನಮ್ಮಲ್ಲಿ ಯಾರು ಹುಡುಗಿಯರ ಹಿಂದೆ ಹೋಗದೆ ಬಾಕಿ ಉಳಿದಿಲ್ಲ '' ಎಂದು ಕೇಳಿ ವಿವಾದಕ್ಕೆ ಕಾರಣವಾಗಿದ್ದರು.
Advertisement