2022ರ ವೇಳೆಗೆ ಪ್ರತಿ ಹಳ್ಳಿಗೂ 24 ಗಂಟೆಗಳ ನಿರಂತರ ವಿದ್ಯುತ್: ಪ್ರಧಾನಿ ಮೋದಿ

ಬಿಬಿಎಂಪಿ ಚುನಾವಣೆ ಮುಗಿಯುತ್ತದ್ದಂತೆ ರಾಜ್ಯದ ಜನತೆ ಪವರ್ ಕಟ್ ನಿಂದಾಗಿ ಪರಿತಪಿಸುವಂತಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಬಿಬಿಎಂಪಿ ಚುನಾವಣೆ ಮುಗಿಯುತ್ತದ್ದಂತೆ ರಾಜ್ಯದ ಜನತೆ ಪವರ್ ಕಟ್ ನಿಂದಾಗಿ ಪರಿತಪಿಸುವಂತಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು 2022ರ ವೇಳೆ ಪ್ರತಿ ಹಳ್ಳಿಗೂ 24 ಗಂಟೆಗಳ ನಿರಂತರ ವಿದ್ಯುತ್ ಕಲ್ಪಿಸುವ ಗುರಿ ಹೊಂದಿದ್ದೇವೆ ಎಂದರು.

ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 2022ಕ್ಕೆ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದು, ಆ ವೇಳೆಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಒದಗಿಸುವ ಭರವಸೆ ನೀಡಿದ್ದಾರೆ.

ಉತ್ತರಾಖಂಡ್ ವಿದ್ಯಾರ್ಥಿ ಸಾರ್ಥಕ್ ಭಾರದ್ವಾಜ್ ಎಂಬಾತ, ದೇಶದಲ್ಲಿ ಇಷ್ಟು ವರ್ಷಗಳಾದರೂ ಬಹಳಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಕನಸಿನ ಡಿಜಿಟಲ್ ಇಂಡಿಯಾ ಕನಸು ಸಾಕಾರವಾಗಲಿದೆಯೇ ಎಂದು ಕೇಳಿದಕ್ಕೆ ಮೋದಿ ಅವರು ಈ ರೀತಿ ಉತ್ತರಿಸಿದ್ದಾರೆ.

ದೇಶದ 18,000 ಹಳ್ಳಿಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿವೆ. ಮುಂದಿನ 1000 ದಿನಗಳೊಳಗಾಗಿ ಈ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದರು. ಅಲ್ಲದೇ ಡಿಜಿಟಲ್ ಇಂಡಿಯಾ ಸೋಲಾರ್ ಸಂಪರ್ಕದಿಂದಲೂ ಸಾಕಾರಗೊಳ್ಳಬಹುದಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com