
ಮುಂಬಯಿ: ತೀವ್ರ ಕೂತೂಹಲ ಮೂಡಿಸಿರುವ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬಯಿ ಪೊಲೀಸರು ಮುಖರ್ಜಿ ಕುಟುಂಬದ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ಬ್ಯಾಂಕ್ ಗಳಿಗೆ ಸೂಚಿಸಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೇ ಪೀಟರ್ ಮುಖರ್ಜಿ ಬ್ರಿಟನ್ ನಲ್ಲಿ ಹೊಂದಿರುವ ಬ್ಯಾಂಕ್ ಖಾತೆ ಗಳ ವಿವರ ನೀಡುವಂತೆ ಪೊಲೀಸರು ಕೇಳಿದ್ದಾರೆ. ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮುಂಬಯಿನ ಖಾರ್ ಪೊಲೀಸ್ ಠಾಣೆಗೆ ಗುರುವಾರ ವಿಚಾರಣೆಗೆ ಪೀಟರ್ ಮುಖರ್ಜಿ ಹಾಜರಾಗಿದ್ದರು. ಈ ವೇಳೆ ಬ್ಯಾಂಕ್ ವಹಿವಾಟುಗಳ ವಿವರ ಹಾಗೂ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇನ್ನು ಶೀನಾ ಬೋರಾ ತಂದೆ ಎಂದು ಹೇಳಿಕೊಂಡಿರುವ ಸಿದ್ದಾರ್ಥ ದಾಸ್ ನ್ನು ಕೂಡ ಮುಂಬಯಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇಂದ್ರಾಣಿ ಮುಖರ್ಜಿಯನ್ನು ಇಂದು ಕೂಡ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
Advertisement