ನನಗೆ ಫ್ಯಾಷನ್ ಡಿಸೈನರ್ ಇಲ್ಲ, ನಾನು ಧರಿಸುವುದು ಸರಳ ಉಡುಪು: ಮೋದಿ

ಗುರಿ ಸಾಧಿಸುವ ಹಾದಿಯಲ್ಲಿ ಸೋತಾಗ ವಿಮುಖರಾಗದಿರಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಧೈರ್ಯವಾಗಿ ಮುನ್ನಡೆಯಿರಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ``ಗುರಿ ಸಾಧಿಸುವ ಹಾದಿಯಲ್ಲಿ ಸೋತಾಗ ವಿಮುಖರಾಗದಿರಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಧೈರ್ಯವಾಗಿ ಮುನ್ನಡೆಯಿರಿ.'' ಇದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ನೀಡಿರುವ ಕರೆ.

ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ 2ನೇ ಬಾರಿಗೆ ಶಿಕ್ಷಕರ ದಿನವನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸಿದ ಮೋದಿ, ಶುಕ್ರವಾರ ದೆಹಲಿ ಶಾಲೆಗಳ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರೊಂದಿಗೆ 105 ನಿಮಿಷ ಸಂವಾದ ನಡೆಸಿದರೆ, 9 ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮೋದಿ ಅವರು, ತಮಗ್ಯಾರೂ ಫ್ಯಾಷನ್ ಡಿಸೈನರ್‍ಗಳಿಲ್ಲ. ನಾನೊಬ್ಬ ಸರಳ ವ್ಯಕ್ತಿ ಎಂದೂ ಹೇಳಿದ್ದಾರೆ.

ನಾನು ಧರಿಸುವುದು ಸರಳ ಉಡುಪು: ಮೋದಿ

  • ನನಗೊಬ್ಬ ಫ್ಯಾಷನ್ ಡಿಸೈನರ್ ಇದ್ದಾನೆ ಎನ್ನುವುದು ಬರೀ ವದಂತಿಯಷ್ಟೆ. ನಾನು ಧರಿಸುವುದು ಸರಳ ಉಡುಪಷ್ಟೆ
  • ನಾನು ಬಡ ಕುಟುಂಬದಿಂದ ಬಂದವ, ಗುಜರಾತ್‍ನದ್ದು ಶೀತ ಹವಾಮಾನ. ಹಾಗಾಗಿ ನಾನು ಕುರ್ತಾ-ಪೈಜಾಮ ಧರಿಸುತ್ತೇನೆ. ನನ್ನ ಬಟ್ಟೆ ನಾನೇ ಒಗೆಯಬೇಕು. ಉದ್ದ ತೋಳಿನ ಅಂಗಿಯನ್ನು ಒಗೆಯಲು ಕಷ್ಟ. ಅದಕ್ಕಾಗಿ ಉದ್ದ ತೋಳನ್ನು ಕತ್ತರಿಸಿ ಸ್ಲೀವ್‍ಲೆಸ್ ಕುರ್ತಾ ಧರಿಸುತ್ತೇನೆ
  •  ನಾನು ತರಗತಿ ಮುಗಿದ ಬಳಿಕ ಚಾಕ್ ಗಳನ್ನೆಲ್ಲ ಸಂಗ್ರಹಿಸಿ, ಅದರಿಂದಲೇ ಬಿಳಿ ಕ್ಯಾನ್‍ವಾಸ್ ಶೂಗಳನ್ನು ಸ್ವಚ್ಛಗೊಳಿಸುತ್ತಿದ್ದೆ
  • ಪ್ರಜಾಸತ್ತ ರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಮುಖ್ಯ. ಹಾಗಾಗಿ ಎಲ್ಲ ಕ್ಷೇತ್ರದ ಉತ್ತಮ, ಪ್ರತಿಭಾವಂತ ಜನ ರಾಜಕೀಯ ಸೇರಬೇಕು. ಇದು ದೇಶದ ಭವಿಷ್ಯಕ್ಕೆ ಒಳ್ಳೆಯದು
  • ವಿವಿಧ ವೃತ್ತಿಯಲ್ಲಿರುವ ಬುದಿಟಛಿವಂತರು ವಾರಕ್ಕೆ 1 ಗಂಟೆಯಾದರೂ ವಿದ್ಯಾರ್ಥಿ ಗಳಿಗೆ ಕಲಿಸುವ ಅಭ್ಯಾಸ ಬೆಳೆಸಿಕೊಳ್ಳಲಿ.
  • ವಿದ್ಯಾರ್ಥಿಗಳೇ ಶಿಕ್ಷಕರ ಐಡೆಂಟಿಟಿ(ಗುರುತು) ಇದ್ದಂತೆ. ತಾಯಿ ಮಗುವಿಗೆ ಜೀವ ಕೊಟ್ಟರೆ, ಗುರುವು ಅದೇ ಮಗುವಿಗೆ ಜೀವನ ನೀಡುವವನು.
  • ಪ್ರತಿಯೊಬ್ಬ ಉತ್ತಮ ವೈದ್ಯ, ಎಂಜಿನಿಯರ್, ವಿಜ್ಞಾನಿಯ ಹಿಂದೆ ಒಬ್ಬ ಉತ್ತಮ ಶಿಕ್ಷಕನಿರುತ್ತಾನೆ
ಸಾಧನೆಗೆ ತಾಯಿಯೇ ಕಾರಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com