
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಸೆ.7 ವರೆಗೆ ವಿಸ್ತರಿಸಲಾಗಿದೆ.
ಪ್ರಕರಣದ ಆರೋಪಿಗಳಾದ ಇಂದ್ರಾಣಿ ಮುಖರ್ಜಿ, ಕಾರು ಚಾಲಕ ಶ್ಯಾಮ್ ರೈ, ಇಂದ್ರಾಣಿ ಮುಖರ್ಜಿಯ ಮಾಜಿ ಪತಿ ಸಂಜೀವ್ ಖನ್ನಾ ಪೊಲೀಸ್ ಕಸ್ಟಡಿ ಅವಧಿ ಸೆ.5 ಕ್ಕೆ ಮುಕ್ತಾಯಗೊಂಡಿತ್ತು. ಆರೋಪಿಗಳನ್ನು ಮುಂಬೈ ಕೋರ್ಟ್ ಎದುರು ಹಾಜರುಪಡಿಸಿದ ಮುಂಬೈ ಪೊಲೀಸರು, ಇಂದ್ರಾಣಿ ಮುಖರ್ಜಿ ಪೊಲೀಸ್ ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಪಡೆಯಬೇಕಿರುವುದರಿಂದ ಕಸ್ಟಡಿ ವಿಸ್ತರಣೆ ಮಾಡಬೇಕೆಂದು ಎಂದು ಕೋರ್ಟ್ ಗೆ ಮನವಿ ಮಾಡಿದ್ದರು.
ಪೊಲೀಸ್ ಕಸ್ಟಡಿ ವಿಸ್ತರಣೆಯಾಗಿದ್ದು ಆರೋಪಿಗಳನ್ನು ಮುಂಬೈ ನ ಖಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
Advertisement