ಸುಧಾರಿತ ಸುರಕ್ಷತೆಗಾಗಿ ಇಸ್ರೋ ಸಂಸ್ಥೆಯೊಂದಿಗೆ ರೈಲ್ವೆ ಇಲಾಖೆ ಒಪ್ಪಂದ

ಸುಧಾರಿತ ಸುರಕ್ಷತೆ, ಸಾಮಾರ್ಥ್ಯ ವೃದ್ಧಿಗೊಳಿಸಲು ರೈಲ್ವೆ ಇಲಾಖೆ ಇಸ್ರೋ ಜೊತೆ ಕೈ ಜೋಡಿಸಲಿದೆ.
ಇಸ್ರೋ ಸಂಸ್ಥೆಯೊಂದಿಗೆ ರೈಲ್ವೆ ಇಲಾಖೆ ಒಪ್ಪಂದ
ಇಸ್ರೋ ಸಂಸ್ಥೆಯೊಂದಿಗೆ ರೈಲ್ವೆ ಇಲಾಖೆ ಒಪ್ಪಂದ

ನವದೆಹಲಿ: ಸುಧಾರಿತ ಸುರಕ್ಷತೆ, ಸಾಮಾರ್ಥ್ಯ ವೃದ್ಧಿಗೊಳಿಸಲು ರೈಲ್ವೆ ಇಲಾಖೆ ಇಸ್ರೋ ಜೊತೆ ಕೈ ಜೋಡಿಸಲಿದೆ.

ಸ್ಯಾಟಲೈಟ್ ಚಿತ್ರಗಳನ್ನು ಬಳಸಿಕೊಂಡು ಸುರಕ್ಷತೆಯನ್ನು ಹೆಚ್ಚಿಸಿ,  ಕಾರ್ಯಕ್ಷಮತೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಇಸ್ರೋ ಜೊತೆ ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ರೈಲ್ವೆ ಮಾರ್ಗದ ಜಿಐಎಸ್ ಮ್ಯಾಪಿಂಗ್ ಗಾಗಿ ಬೃಹತ್ ಯೋಜನೆ ತಯಾರಾಗುತ್ತಿದ್ದು, ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಪ್ಲಾಟ್ ಫಾರ್ಮ್ ರಚಿಸಲು ಇಸ್ರೋ ಸಂಸ್ಥೆಯೊಂದಿಗೆ ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಒಪ್ಪಂದಿಂದ ಸ್ಯಾಟಲೈಟ್ ಮೂಲಕ ಚಿತ್ರಗಳನ್ನು ಹಾಗೂ ಸಂವನ ನಡೆಸುವುದಕ್ಕೆ ಸಾಧ್ಯ. ಸ್ಯಾಟಲೈಟ್ ಚಿತ್ರಗಳು ರೈಲ್ವೆ ಪ್ರದೇಶವನ್ನು ಗುರುತಿಸಲು ಸಹಕಾರಿಯಾಗಲಿದೆ. ಸ್ಯಾಟಲೈಟ್ ಸಂವನ ರೈಲುಗಳಲ್ಲಿ ವೈಫೈ ಸೇವೆಗಳನ್ನು ಒದಗಿಸಲು ಸಹಕಾರಿಯಾಗಲಿದೆ. ರೈಲು ಅಪಘಾತಗಳು ಸಂಭವಿಸಿದಾಗ ಅಪಘಾತ ನಡೆದ ಪ್ರದೇಶವನ್ನು ಗುರುತಿಸುವುದಕ್ಕೆ ಈ ಒಪ್ಪಂದಿಂದ ಪ್ರಾರಂಭವಾಗುವ ಯೋಜನೆ ಪ್ರಯೋಜನಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com