ಶೀನಾ ಬೋರಾ ಕೊಲೆ ಪ್ರಕರಣ ಪ್ರಮುಖ ಸಾಕ್ಷಿ ಲಭ್ಯ

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಾಕ್ಷ್ಯ ಲಭ್ಯವಾಗಿದೆ ಎಂದು ಮೂಲಗಳು...
ಇಂದ್ರಾಣಿ-ಶೀನಾ ಬೋರಾ
ಇಂದ್ರಾಣಿ-ಶೀನಾ ಬೋರಾ

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಾಕ್ಷ್ಯ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದ್ರಾಣಿ ಮುಖರ್ಜಿ ಅವರು 'ಫೇಕ್ ಇಮೇಲ್ ಐಡಿ' ಕ್ರಿಯೇಟ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಂದ್ರಾಣಿ ತನ್ನ ಜಿಮೇಲ್ ಅಕೌಂಟ್ ನಿಂದ ಮೂರು ಇಮೇಲ್ ಐಡಿಯನ್ನು ಕ್ರಿಯೇಟ್ ಮಾಡಿದ್ದರು. ಈ ಮೂರು ಇಮೇಲ್ ಐಡಿಯನ್ನು ಪೊಲೀಸರು ಪಡೆದಿದ್ದು, 2012ರ ಮಾರ್ಚ್ 8, ಮೇ 5 ಮತ್ತು ಆಗಸ್ಟ್ 7ರಂದು ಅಕೌಂಟ್ ಕ್ರಿಯೇಟ್ ಮಾಡಿರುವುದಾಗಿ ತಿಳಿದು ಬಂದಿದೆ. ಇವು ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಗಳು ಎಂದು ಹೇಳಲಾಗುತ್ತಿದೆ.

ಶೀನಾ ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜಿನಾಮೆ ಪತ್ರವನ್ನು ಶೀನಾ ಸಹೋದರ ಮಿಖಾಯಿಲ್ ಕಳುಹಿಸಿದ್ದನು ಎಂಬ ಮಾತುಗಳು ಕೇಳಿಬಂದಿತ್ತು. ಇದು ಇಂದ್ರಾಣಿ ಒತ್ತಾಯದ ಮೇರೆಗೆ ಮಿಖಾಯಿಲ್ ಶೀನಾ ಹೆಸರಿನಲ್ಲಿ ಇಮೇಲ್ ಮಾಡಿದ್ದನು ಎಂದು ಹೇಳಲಾಗಿತ್ತು. ಆದರೆ, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಇಂದ್ರಾಣಿ ನಕಲಿ ಇಮೇಲ್ ಐಡಿ ಕ್ರಿಯೇಟ್ ಮಾಡಿ, ಶೀನಾ ಕೆಲಸ ಮಾಡುತ್ತಿದ್ದ ಕಂಪನಿಗೆ ಇಂದ್ರಾಣಿಯೇ ನಕಲಿ ಇಮೇಲ್ ಮೂಲಕ ರಾಜಿನಾಮೆ ಪತ್ರ ಕಳುಹಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಅಲ್ಲದೇ, ಇಂದ್ರಾಣಿ ಮುಖರ್ಜಿ ಹಣಕಾಸು ವ್ಯವಹಾರ ಕುರಿತು ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ. ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com