ಅಂದು ಪಾಕ್ ಬಾಂಬ್‌ ಸುರಿಮಳೆಗೈದರೂ ದ್ವಾರಕಾದೀಶ ದೇಗುಲಕ್ಕೆ ಹಾನಿಯಾಗಿಲ್ಲ!

ಈ ಬಾಂಬ್ ದಾಳಿಯಲ್ಲಿ ದ್ವಾರಕೆಯಲ್ಲಿನ ನಾಗರೀಕರಿಗೆ, ಸೈನಿಕರಿಗೆ ಮತ್ತು ಇತರ ವಸ್ತುಗಳಿಗೆ ಹಾನಿಯುಂಟಾತೇ ವಿನಾ ದೇಗುಲಕ್ಕೇನೂ...
ದ್ವಾರಕಾದೀಶ ದೇಗುಲ ( ಕೃಪೆ :ವಿಕಿಪೀಡಿಯಾ)
ದ್ವಾರಕಾದೀಶ ದೇಗುಲ ( ಕೃಪೆ :ವಿಕಿಪೀಡಿಯಾ)

ನವದೆಹಲಿ: 1965ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ನೌಕಾಪಡೆ ಗುಜರಾತ್ ಕಡಲ ತೀರದ ದ್ವಾರಕಾ ಮೇಲೆ ದಾಳಿ ನಡೆಸಿತ್ತು. ಆದರೆ ಅಲ್ಲಿರುವ ದ್ವಾರಕಾದೀಶ ದೇಗುಲವನ್ನು ಪಾಕ್ ಬಾಂಬ್‌ಗೂ ಸ್ಪರ್ಶಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರೆ ನೀವು ನಂಬುತ್ತೀರಾ? ನಂಬಲೇ ಬೇಕು.

1965 ಸೆಪ್ಟೆಂಬರ್ 7ರಂದು ಪಾಕ್ ನೌಕಾಪಡೆ ದ್ವಾರಕೆಯ ಮೇಲೆ 156 ಬಾಂಬ್‌ಗಳ ದಾಳಿ ನಡೆಸಿತ್ತು.

ದ್ವಾರಕಾ ಮತ್ತು ದ್ವಾರಕಾದೀಶ ದೇಗುಲದ ಮೇಲೆ ಪಾಕ್ ನೌಕಾದಳ 156 ಬಾಂಬ್‌ಗಳನ್ನು  ಎಸೆದಿತ್ತು ಎಂದು ರೇಡಿಯೋ ಪಾಕ್ ಕೂಡಾ ದೃಢೀಕರಿಸಿತ್ತು,

ಏತನ್ಮಧ್ಯೆ, ಈ ಬಾಂಬ್ ದಾಳಿಯಲ್ಲಿ ದ್ವಾರಕೆಯಲ್ಲಿನ ನಾಗರೀಕರಿಗೆ, ಸೈನಿಕರಿಗೆ ಮತ್ತು ಇತರ ವಸ್ತುಗಳಿಗೆ ಹಾನಿಯುಂಟಾತೇ ವಿನಾ ದೇಗುಲಕ್ಕೇನೂ ಆಗಲಿಲ್ಲ.

ಈ ದಾಳಿಯಲ್ಲಿ ದೇಗುಲದ ಒಂದು ಪಾರ್ಶ್ವಕ್ಕೆ ಮಾತ್ರ ಸ್ವಲ್ಪ ಹಾನಿಯುಂಟಾಯಿತೇ ಹೊರತು ಬೇರೇನೂ ಆಗಲಿಲ್ಲ. ಅಂದರೆ ದ್ವಾರಕಾದೀಶ ದೇಗುಲದಲ್ಲಿ ಶ್ರೀಕೃಷ್ಣನ ಪವಾಡದಿಂದಲೇ ಇದೆಲ್ಲ ನಡೆದಿದೆ ಎಂಬ ನಂಬಿಕೆ ಇಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com