ಸಾಂದರ್ಭಿಕ ಚಿತ್ರ
ದೇಶ
ಮುಂಬೈ: ಉಪನಗರದಲ್ಲಿ 8 ದಿನಗಳ ಕಾಲ ಮಾಂಸ ಮಾರಾಟ ನಿಷೇಧ
ಮಹಾರಾಷ್ಟ್ರದ ಉತ್ತರದ ಉಪ ನಗರಗಳಾದ ಮಿರಾರೋಡ್ ಹಾಗೂ ಭಾಯಿಂದರ್‌ನಲ್ಲಿ 8 ದಿನಗಳ ಕಾಲ ಮಾಂಸ ಮಾರಾಟವನ್ನು...
ಮುಂಬೈ: ಮಹಾರಾಷ್ಟ್ರದ ಉತ್ತರದ ಉಪ ನಗರಗಳಾದ ಮಿರಾರೋಡ್ ಹಾಗೂ ಭಾಯಿಂದರ್‌ನಲ್ಲಿ 8 ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಬಿಜೆಪಿ ನೇತೃತ್ವದ ಮಿರಾ-ಭಾಯಿಂದರ್ ಮಹಾ ನಗರದ ಪಾಲಿಕೆ(ಎಂಬಿಎಂಸಿ) ಮಾಂಸ ಮಾರಾಟಕ್ಕೆ 8 ದಿನಗಳ ಕಾಲ ನಿಷೇದಾಜ್ಞೆ ಜಾರಿಗೆ ತಂದಿದೆ. ಇಲ್ಲಿನ ಜೈನ ನಿವಾಸಿಗಳು ಈ ತಿಂಗಳು ಜೈನರ ಉಪವಾಸ ವ್ರತ‘ಪರ್ಯಾಫಣದ’ಮಾಡುತ್ತಾರೆ.
ಈ ಹಿನ್ನಲೆಯಲ್ಲಿ, ಎಂಬಿಎಂಸಿ ಅಧಿಕಾರ ಹಿಡಿದಿರುವ ಬಿಜೆಪಿ, ಸೆ.10ರಿಂದ 28ರ ನಡುವಿನ ಉಪವಾಸದ ಅವಧಿಯಲ್ಲಿ ಮಾಂಸ ಮಾರಾಟ ಹಾಗೂ ಜಾನುವಾರು ವಧೆ ನಿಷೇಧಿಸುವ ಹಕ್ಕನ್ನು ಮತದಾನದಲ್ಲಿ ಗೆದ್ದಿದೆ.
ಜೈನ ಶ್ವೇತಾಂಬರರು ಸೆ.11ರಿಂದ 18 ಹಾಗೂ ದಿಗಂಬರರು ಸೆ.18ರಿಂದ 28 ರವರೆಗೆ ಪರ್ಯಾಫಣವನ್ನು (ಉಪವಾಸ) ಆಚರಿಸುತ್ತಾರೆ. 2011 ರ ಜನಗಣತಿಯಂತೆ ಈ ಪ್ರದೇಶದ ಜನಸಂಖ್ಯೆ 8.5 ಲಕ್ಷವಿದ್ದು, ಅವರಲ್ಲಿ ಸುಮಾರು 1.25 ಲಕ್ಷ ಜೈನರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ