
ಲಾಹೋರ್: ``ರಾಜೀವ್ ಗಾಂಧಿ ಅವರು ಸ್ಫುರ-ದ್ರೂಪಿ ಯುವಕನಾಗಿದ್ದ ಕಾರಣ ಅವರನ್ನು ಸೋನಿಯಾ ವಿವಾಹವಾದರು''. ಹೀಗೆಂದು ಹೇಳಿದ್ದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ.
ಅಷ್ಟೇ ಅಲ್ಲ, ಸ್ವತಃ ಸೋನಿಯಾ ಅವರೇ ಈ ಮಾತನ್ನು ಹೇಳಿದ್ದರು ಎಂದೂ ಕಸೂರಿ ತಿಳಿಸಿದ್ದಾರೆ. ತಮ್ಮ ಹೊಸ ಪುಸ್ತಕ ``ನೈದರ್ ಎ ಹಾಕ್ ನಾರ್ ಎ ಡವ್''ನಲ್ಲಿ ಕಸೂರಿ ಅವರು, 2005ರಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪಾಕ್ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರ್ರಫ್ ಅವರ ಭಾರತ ಭೇಟಿ ವೇಳೆ ನಾನೂ ಅವರೊಂದಿಗೆ ತೆರಳಿದ್ದು ಸೋನಿಯಾ ಗಾಂಧಿಯನ್ನು ಭೇಟಿಯಾ- ಗುವ ಅವಕಾಶ ಸಿಕ್ಕಿತ್ತು. ಸೋನಿಯಾ ಹಾಗೂ ನಟವರ್ ಸಿಂಗ್ ಜತೆ ನಾನು ವೈಟಿಂಗ್ ರೂಂನಲ್ಲಿ ಕುಳಿತಿದ್ದೆ. ಸೋನಿ- ಯಾರನ್ನು ಮಾತಿಗೆಳೆಯುವ ಸಲುವಾಗಿ ನಾನು ಹೀಗೆ ಹೇಳಿದೆ-
``ನಾನೊಮ್ಮೆ ಕ್ಯಾಂಬ್ರಿಡ್ಜ್‍ನಲ್ಲಿ ಕಾಂಗ್ರೆಸ್ ನಾಯಕ ಮಿಯಾನ್ ಇಫ್ತಿಕಾರುದ್ದೀನ್‍ರ ಪುತ್ರ ಸೊಹೈಲ್ ಇಫ್ತಿಕಾರ್ ಜತೆ ಕುಳಿತು ಹರಟುತ್ತಿದ್ದೆ. ಆಗ ನಮ್ಮ ಮುಂದಿನಿಂದ ಒಬ್ಬ ಸ್ಫುರದ್ರೂಪಿ(ಹ್ಯಾಂಡ್‍ಸಮ್) ಯುವಕ ಹಾದುಹೋದರು. ನಾನಾಗ ಯಾರೀ ಯುವಕ ಎಂದು ಸೊಹೈಲ್ ನಲ್ಲಿ ಪ್ರಶ್ನಿಸಿದೆ.
ಆಗ ಅವರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು- ಆ ಯುವಕನ ಹೆಸರು ರಾಜೀವ್. ಪಂಡಿತ್ ಜವಾಹರ್‍ಲಾಲ್ ಅವರ ಮೊಮ್ಮಗ ಎಂದು''. ``ನನ್ನ ಬಾಯಲ್ಲಿ ರಾಜೀವ್ ಎಂಬ ಹೆಸರು ಕೇಳುತ್ತಿದ್ದಂತೆ ನನ್ನತ್ತ ತಿರುಗಿದ ಸೋನಿಯಾ, ಬಹಳ ಖುಷಿಯಿಂದ ನಗೆ ಬೀರುತ್ತಾ, ``ಅದಕ್ಕೇ ನಾನವರನ್ನು ಮದುವೆಯಾಗಿದ್ದು'' ಎಂದರು'' ಎಂದು ಕಸೂರಿ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಭಾರತ ಭೇಟಿಯಲ್ಲಿನ ಹಲವು ವಿಚಾರಗಳನ್ನು ಅವರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
Advertisement