ಉದಂಪುರ ದಾಳಿ: ನಾಳೆ ಶೌಕತ್ ಸುಳ್ಳು ಪತ್ತೆ ಪರೀಕ್ಷೆ

ಜಮ್ಮು-ಕಾಶ್ಮೀರದ ಉದಂಪುರ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ದಾಳಿ ಸಂಬಂಧ ಬಂಧಿತನಾಗಿರುವ ಶಂಕಿತ ಲಷ್ಕರ್-ಎ-ತಯ್ಯಬಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು-ಕಾಶ್ಮೀರದ ಉದಂಪುರ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ದಾಳಿ ಸಂಬಂಧ ಬಂಧಿತನಾಗಿರುವ ಶಂಕಿತ ಲಷ್ಕರ್-ಎ-ತಯ್ಯಬಾ ಕಾರ್ಯಕರ್ತ ಶೌಕತ್ ಅಹ್ಮದ್ ಭಟ್ ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ವಿಶೇಷ ನ್ಯಾಯಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ ಐಎ) ಅನುಮತಿ ನೀಡಿದೆ.

ಶೌಕತ್ ಅಹ್ಮದ್ ಭಟ್ ನನ್ನು ಖಾಸಗಿ ವಿಚಾರಣೆಗೆಂದು ಜಿಲ್ಲಾ ನ್ಯಾಯಾಧೀಶ ಅಮರ್ ನಾಥ್ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ಆತ ಅಸಮಂಜಸ ಹೇಳಿಕೆ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಯ ಪಿತೂರಿ ಬಗ್ಗೆ ತಿಳಿದುಕೊಳ್ಳಲು ಆತನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆಯೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮನವಿ ಮಾಡಿತ್ತು. ಅದರಂತೆ ಶೌಕತ್ ಅಹ್ಮದ್ ಭಟ್ ನನ್ನು ದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಾಳೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಶೌಕತ್ ಭಟ್ ದೆಹಲಿಯ ಎನ್ ಐಎಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com