
ನವದೆಹಲಿ: ಪುಣೆಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಕಿರುತೆರೆ ನಟ ಗಜೇಂದ್ರ ಚೌಹಾಣ್ ನೇಮಕದ ವಿಚಾರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿಹಾಕಿದೆ.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಗೌರವಾನ್ವಿತ ಸಂಸ್ಥೆಯೊಂದು ನಿಷ್ಕ್ರೀಯಗೊಂಡಿದೆ. ವಿವಾದ ಇತ್ಯರ್ಥಗೊಳಿಸಲು ಸರ್ಕಾರವೂ ಕ್ರಮ ಕೈಗೊಂಡಿಲ್ಲ. ತರಗತಿಗೆ ಹಾಜರಾಗಬೇಕೆಂಬ ಇಚ್ಛೆ ಹೊಂದಿರುವ ವಿದ್ಯಾರ್ಥಿಗಳಿಗೆ ಭದ್ರತೆ ಕಲ್ಪಿಸಬೇಕು.
ಈ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲ ವಿನೀತ್ ಧಂಡ ಮನವಿ ಮಾಡಿದರು. ಆದರೆ, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಇದೇ ವೇಳೆ ಗಜೇಂದ್ರ ಚೌಹಾಣ್ ಅವರು ಮುಂದುವರಿಯಬಾರದು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಆಮರಣ ಉಪವಾಸ ಕೈಗೊಳ್ಳಲಿದ್ದಾರೆ.
Advertisement