ಅಪ್ರಾಪ್ತ ಜೂಡೋ ಚಾಂಪಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಅಪ್ರಾಪ್ತ ರಾಷ್ಟ್ರ ಮಟ್ಟದ ಜೂನಿಯರ್ ಜೂಡೋ ಆಟಗಾರ್ತಿಯನ್ನು ಅಪಹರಿಸಿದ ಕಾಮುಕರ ಗುಂಪೊಂದು ಆಕೆಗೆ ಮತ್ತಿನ ಔಷಧಿ ನೀಡಿ ನಂತರ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಹರಿಯಾಣದ ಮಿಲೇನಿಯಂ ಸಿಟಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಗುರ್‌ಗಾಂವ್: ಅಪ್ರಾಪ್ತ ರಾಷ್ಟ್ರ ಮಟ್ಟದ ಜೂನಿಯರ್ ಜೂಡೋ ಆಟಗಾರ್ತಿಯನ್ನು ಅಪಹರಿಸಿದ ಕಾಮುಕರ ಗುಂಪೊಂದು ಆಕೆಗೆ ಮತ್ತಿನ ಔಷಧಿ ನೀಡಿ ನಂತರ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಹರಿಯಾಣದ ಮಿಲೇನಿಯಂ ಸಿಟಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಘಟನೆ ನಡೆದು ತಿಂಗಳುಗಳ ಕಾಲವಾಗಿದ್ದು, ಅತ್ಯಾಚಾರಕ್ಕೊಳಗಾದ ಬಾಲಕಿ ಸೋಮವಾರ ಬಿಲಾಸ್ಪುರ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದಾಳೆಂದು ತಿಳಿದುಬಂದಿದೆ.

11 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ, ತನ್ನ ಗೆಳತಿ ಹಾಗೂ ತರಬೇತುದಾರನೊಂದಿಗೆ ಶಾಲೆ ಮುಗಿಸಿ ಕಾಲ್ನಡಿಗೆಯ ಮೂಲಕ ಮನೆಗೆ ತೆರಳುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಕೆಟ್ಟ ಶಬ್ಧದ ಮೂಲಕ ಹೇಳಿಕೆ ನೀಡಿ ಮುಂದೆ ಹೋಗಿದ್ದಾರೆ. ಇದಕ್ಕೆ ತರಬೇತುದಾರ ವಿರೋಧ ವ್ಯಕ್ತಪಡಿಸಿದ್ದಾನೆ. 2-3 ನಿಮಿಷವಾದ ನಂತರ ಮತ್ತೆ ಹಿಂದಕ್ಕೆ ಬಂದ ಯುವಕರ ಗುಂಪು ತರಬೇತುದಾರನಿಗೆ ಹಿಗ್ಗಾಮುಗ್ಗಾ ಥಳಿಸಿ ಬಾಲಕಿ ಹಾಗೂ ಆಕೆಯ ಗೆಳತಿಯನ್ನು ಬಲವಂತದಿಂದ ಕಾರನ್ನು ಹತ್ತಿಸಿಕೊಂಡಿದ್ದಾರೆ.

ನಂತರ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾಲಕಿಯ ಗೆಳತಿಗೆ ಬೆದರಿಕೆ ಹಾಕಿದ ಯುವಕರ ಗುಂಪು ಆಕೆಯನ್ನು ಕಾರಿನಿಂದ ಕೆಳಗಿಳಿಸಿದ್ದಾರೆ. ನಂತರ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಯುವಕರ ಗುಂಪು ಮತ್ತಿನ ಔಷಧಿಯೊಂದನ್ನು ಬಾಲಕಿಗೆ ಬಲವಂತದಿಂದ ನೀಡಿ ನಂತರ ಎಲ್ಲರೂ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಕೆಲವು ಘಂಟೆಗಳ ಬಳಿಕ ಪ್ರಜ್ಞೆ ಬಂದ ಬಾಲಕಿಗೆ ಯುವಕರ ಗುಂಪು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ.

ಯುವಕರ ಬೆದರಿಕೆಗೆ ಹೆದರಿದ ಬಾಲಕಿ ನಡೆದ ವಿಷಯವನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದಾಳೆ. ಆದರೂ, ಬಾಲಕಿಯ ಬೆನ್ನು ಬಿಡದ ಕಾಮುಕರು ಮತ್ತೆ ಆಕೆಯ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಹೆದರಿದ ಬಾಲಕಿ ನಡೆದ ಘಟನೆಯನ್ನು ತನ್ನ ಸಂಬಂಧಿಕರೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ನಂತರ ಸಂಬಂಧಿಕರು ವಿಷಯವನ್ನು ಬಾಲಕಿಯ ಪೋಷಕರಿಗೆ ಮುಟ್ಟಿಸಿದ್ದಾರೆಂದು ಬಾಲಕಿ ತಾನು ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಬಾಲಕಿ ನೀಡಿರುವ ದೂರಿನ ಪ್ರಕಾರ ಈಗಾಗಲೇ ಆರೋಪಗಳ ವಿರುದ್ಧ 376-ಜಿ (ಸಾಮೂಹಿಕ ಅತ್ಯಾಚಾರ) ಕಾಯ್ದೆಯ ಅಡಿಯಲ್ಲಿ ಆರೋಪಿಗಳ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂದ ಶಂಕಿತ ಕಾರ್ತಿಕ್ ಎಂಬ ಯುವಕನನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ರಾಜೇಶ್ ಕುಮಾರ್ ಚೇಚಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com