ಸಾಂದರ್ಭಿಕ ಚಿತ್ರ
ದೇಶ
ಸರ್ಕಾರಿ ನೌಕರರಿಗೆ ಗಣೇಶ ಹಬ್ಬದ ಉಡುಗೊರೆ: ತುಟ್ಟಿ ಭತ್ಯೆ ಏರಿಸಿದ ಕೇಂದ್ರ
ಕೇಂದ್ರ ಸರ್ಕಾರಿ ನೌಕರರಿಗೆ ಶೇ. 6 ರಷ್ಟು ತುಟ್ಟಿಭತ್ಯೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ....
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೇ. 6 ರಷ್ಟು ತುಟ್ಟಿಭತ್ಯೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
6 ಪರ್ಸೆಂಟ್ ಇಂದ 119 ಪರ್ಸೆಂಟ್ ಗೆ ತುಟ್ಟಿಭತ್ಯೆ ಏರಿಕೆ ಮಾಡಿದ್ದು, ಪಿಂಚಣಿದಾರರು ಸೇರಿ 1 ಕೋಟಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಕೇಂದ್ರ 6 ಪರ್ಸೆಂಟ್ ಇಂದ 113 ಪರ್ಸೆಂಟ್ ಗೆ ತುಟ್ಟಿ ಭತ್ಯೆ ಏರಿಕೆ ಮಾಡಿತ್ತು. ತುಟ್ಟಿ ಭತ್ಯೆ ಏರಿಕೆ ಜುಲೈ 1ರಿಂದ ನೌಕರರಿಗೆ ಅನ್ವಯವಾಗಲಿದೆ. 6ನೇ ವೇತನ ಆಯೋಗದ ಶಿಪಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಏರಿಕೆ ಮಾಡಲಾಗಿದೆ.
48 ಲಕ್ಷ ಸರ್ಕಾರಿ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರು ಈ ತುಟ್ಟಿ ಭತ್ಯೆ ಪಡೆಯಲಿದ್ದಾರೆ,
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ