
ನವದೆಹಲಿ: ಕೇಂದ್ರ ಸಚಿವ ಸಂಪುಟ ಬಹುನಿರೀಕ್ಷಿತ ಸ್ಪೆಕ್ಟ್ರಂ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿದೆ. ವಿರಳ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ಸ್ಪೆಕ್ಟ್ರಂ ಟ್ರೇಡಿಂಗ್ ಮಾರ್ಗಸೂಚಿ ಸಹಕಾರಿಯಾಗಲಿದೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ಸ್ಪೆಕ್ಟ್ರಂ ಟ್ರೇಡಿಂಗ್ ಮಾರ್ಗಸೂಚಿ ಜಾರಿಯಾಗಿರುವುದರಿಂದ ದೂರಸಂಪರ್ಕ ಸಂಸ್ಥೆಗಳು ತಮ್ಮ ಗುಂಪಿನೊಳಗೇ ತರಂಗಾಂತರಗಳನ್ನು ಹಂಚಿಕೆ ಮಾಡಿಕೊಳ್ಳಬಹುದು ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿಲ್ಲ ಎಂದು ಹೇಳಿದ್ದಾರೆ.
ವಹಿವಾಟು ನಡೆಸುವುದಕ್ಕೂ 45 ದಿನಗಳಿಗೂ ಮುನ್ನ ಟೆಲಿಕಾಂ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದು ರವಿಶಂಕರ್ ಪ್ರಸಾದ್ ಹೇಳಿದಾರೆ.
Advertisement