ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆ

ಸ್ವದೇಶಿ ಬೊಪೋರ್ಸ್ ಎಂದೇ ಗುರುತಿಸಲ್ಪಡುವ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಧನುಶ್ ಫಿರಂಗಿ ಸೇನೆಗೆ ನಿಯೋಜನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಬಲ್ ಪುರ್: ಶೀಘ್ರವೇ ಭಾರತೀಯ ಭೂಸೇನೆಗೆ ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ನಿಯೋಜನೆಗೊಳ್ಳಲಿದೆ.

ಬೊಪೋರ್ಸ್ ಫಿರಂಗಿ ಹಗರಣದ ಹಿನ್ನಲೆಯಲ್ಲಿ ಕಳೆದ 28 ವರ್ಷಗಳಿಂದ ಅತ್ಯಾಧುನಿಕ ಫಿರಂಗಿಗಳಿಲ್ಲದೇ ಭೂಸೇನೆ ಪರದಾಡುತ್ತಿತ್ತು. ಆದರೆ, ಈ ಪರದಾಟ ಶೀಘ್ರದಲ್ಲೇ ನಿವಾರಣೆಯಾಗಲಿದೆ. ಏಕೆಂದರೆ, ಸ್ವದೇಶಿ ಬೊಪೋರ್ಸ್ ಎಂದೇ ಗುರುತಿಸಲ್ಪಡುವ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಧನುಷ್ ಫಿರಂಗಿ ಸೇನೆಗೆ ನಿಯೋಜನೆಗೊಳ್ಳಲಿದೆ.

ಕೋಲ್ಕೊತಾದ ಶಸ್ತ್ರಾಸ್ತ್ರ ಉತ್ಪಾದನಾ ಮಂಡಳಿ ಇದನ್ನು ಅಭಿವೃದ್ಧಿ ಪಡಿಸಿದ್ದು, ಪ್ರತಿ ಫಿರಂಗಿಗೆ 14 ಕೋಟಿ ವೆಚ್ಚವಾಗಲಿದೆ.ಧನುಷ್ ಫಿರಂಗಿ 38 ಕಿ.ಮೀ ನಷ್ಟು ದೂರಕ್ಕೆ ಗುಂಡನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಬೊಪೋರ್ಸ್ ಫಿರಂಗಿಗಿಂತ ಧನುಷ್ ಗುಂಡಿನ ದಾಳಿಯ ವ್ಯಾಪ್ತಿಯನ್ನು 11 ಕಿ.ಮೀನಷ್ಟು ಹೆಚ್ಚಿಸಲಾಗಿದೆ. 

2015ರ ನವೆಂಬರ್ ಹೊತ್ತಿಗೆ ಸೇನೆಗೆ ಧನುಷ್ ಫಿರಂಗಿಯನ್ನು ನಿಯೋಜಿಸಲಾಗುವುದು ಎಂದಿರುವ ಜಬಲ್ ಪುರದಲ್ಲಿರುವ ಫಿರಂಗಿ ತಯಾರಿಕೆ ಘಟಕದ ಹಿರಿಯ ಜನರಲ್ ಮ್ಯಾನೇಜರ್ ಎನ್.ಕೆ ಸಿನ್ಹಾ 45 ಕ್ಯಾಲಿಬರ್ ನೊಂದಿಗೆ 155.ಮಿ.ಮೀ ವ್ಯಾಸದ ನಳಿಕೆ ಹೊಂದಿರುವ ಈ ತೋಪಿಗೆ ಧನುಷ್ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೊಪೋರ್ಸ್ ಫಿರಂಗಿಯು 28.ಕಿ.ಮೀ ದಾಳಿ ವ್ಯಾಪ್ತಿ ಹೊಂದಿತ್ತು. 39 ಕ್ಯಾಲಿಬರ್ ನೊಂದಿಗೆ 155ಮಿ.ಮೀ ವ್ಯಾಸದ ಫಿರಂಗಿಯನ್ನು ತಯಾರಿಸಿಕೊಡುವಂತೆ ಸೇನೆ, ಸದ್ಯ ಬ್ರಿಟನ್ ಮಾಲೀಕತ್ವದಲ್ಲಿರುವ ಬೊಪೋರ್ಸ್ ಕಂಪನಿ ಬಿಎಇಗೆ ಮನವಿ ಸಲ್ಲಿಸಿತ್ತು. ಸೇನೆ ಮನವಿಯನ್ನು ಬಿಎಇ ತಿರಸ್ಕರಿಸಿತ್ತು.

ಈ ಹಿನ್ನಲೆಯಲ್ಲಿ ಫಿರಂಗಿಯ ಸ್ವದೇಶಿ ನಿರ್ಮಾಣಕ್ಕೆ ಕೈಹಾಕಿ, 2012ರ ಸೆಪ್ಟೆಂಬರ್ 22ರಂದು ಫಿರಂಗಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸೇನೆಯ ವಿಶೇಷ ಪರಿಣಿತರನ್ನು ಸೂಚನೆಯ ಮೇರೆಗೆ ಯುದ್ಧ ಭೂಮಿಯ ಅಗತ್ಯಕ್ಕೆ ತಕ್ಕಂತೆ ಫಿರಂಗಿಯನ್ನು ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com