ಡಿಆರ್ ಡಿಓನ ಪ್ರಥಮ ಮಹಿಳಾ ಪ್ರಧಾನ ನಿರ್ದೇಶಕಿಯಾಗಿ ಜೆ ಮಂಜುಳಾ ನೇಮಕ

ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (ಡಿಆರ್'ಡಿಓ)ದ ಪ್ರಧಾನ ನಿರ್ದೇಶಕ ಸ್ಥಾನಕ್ಕೆ...
ಜೆ ಮಂಜುಳಾ
ಜೆ ಮಂಜುಳಾ

ಬೆಂಗಳೂರು: ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (ಡಿಆರ್'ಡಿಓ)ದ ಪ್ರಧಾನ ನಿರ್ದೇಶಕ ಸ್ಥಾನಕ್ಕೆ ಪ್ರಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಜೆ ಮಂಜುಳಾ ಅವರು ಡಿಆರ್ ಡಿಓ ಪ್ರಧಾನ ನಿರ್ದೇಶಕಿಯಾಗಿ ನೇಮಕಗೊಳ್ಳುವುದರ ಮೂಲಕ ಮುಖ್ಯಸ್ಥ ಸ್ಥಾನಕ್ಕೆ ನೇಮಕಗೊಂಡ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದು ಡಿಆರ್ ಡಿಓ ಸಂಸ್ಥೆ ತಿಳಿಸಿದೆ.

ಇವರು ಹೈದ್ರಾಬಾದ್ ನಲ್ಲಿರುವ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಇವರು ಅತೀ ವೇಗದ ಸಿಗ್ನಲ್ ನೀಡುವ ಸ್ವಾಧೀನ ಗ್ರಾಹಕಗಳನ್ನು ಡಿಸೈನ್ ಮಾಡಿದ್ದಾರೆ. ಆರ್ ಎಫ್ ಪದ್ಧತಿಯಲ್ಲಿ ಹೆಚ್ಚಿನ ವಿದ್ಯುತ್ ಹಾಗೂ ಸೈನ್ಯ, ನೌಕಾದಳ, ವಾಯುಪಡೆ ಮತ್ತು ಪ್ಯಾರಾಮಿಲಿಟರಿ ಸೇರ್ಪಡೆಗೊಳಿಸಿರುವ ವಿವಿಧ ಸಿಸ್ಟಮ್ಗಳಿಗೆ ನಿಯಂತ್ರಕ ತಂತ್ರಾಂಶಗಳನ್ನು ಕಂಡು ಹಿಡಿದಿದ್ದಾರೆ.

ಮಂಜುಳಾ ಅವರಿಗೆ 2011ರಲ್ಲಿ ಡಿಆರ್ ಡಿಓ ಸಂಸ್ಥೆ 'ಪರ್ಮಾಮೆನ್ಸ್ ಎಕ್ಸಲೆನ್ಸ್' ಮತ್ತು 'ಸೈಂಟಿಸ್ಟ್ ಆಫ್ ದಿ ಯಿಯರ್ 2011' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com