ನೇಪಾಳ ಯುವತಿಯರ ಮೇಲೆ ಅತ್ಯಾಚಾರ: ಸೌದಿ ರಾಯಭಾರಿ ವಿರುದ್ಧ ಪ್ರಕರಣ ದಾಖಲು

ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ಗುರ್ ಗಾಂವ್ ನಲ್ಲಿನ ತಮ್ಮ ದುಬಾರಿ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ...
ನೇಪಾಳ ಮೂಲದ ಯುವತಿಯರನ್ನು ಬಂಧಿಸಿಟ್ಟಿದ್ದ ಗುರುಂಗಾವ್ ನಲ್ಲಿನ ಫ್ಲ್ಯಾಟ್
ನೇಪಾಳ ಮೂಲದ ಯುವತಿಯರನ್ನು ಬಂಧಿಸಿಟ್ಟಿದ್ದ ಗುರುಂಗಾವ್ ನಲ್ಲಿನ ಫ್ಲ್ಯಾಟ್

ಗುರ್ ಗಾಂವ್ : ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ಗುರ್ ಗಾಂವ್ ನಲ್ಲಿನ ತಮ್ಮ ದುಬಾರಿ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ ಹಿಂಸೆ ನೀಡಿ ಪದೇ ಪದೇ ಅತ್ಯಾಚಾರವೆಸಗಿದರು ಎಂದು ಇಬ್ಬರು ನೇಪಾಳ ಮೂಲದ ಇಬ್ಬರು ಮಹಿಳೆಯರು ಆರೋಪಿಸಿದ್ದಾರೆ.

ಈ ಇಬ್ಬರು ಮಹಿಳೆಯರು ಕಳೆದ ನಾಲ್ಕು ತಿಂಗಳಿನಿಂದ ಆ ವ್ಯಕ್ತಿಯ ಮನೆಯಲ್ಲಿ ಕೆಲಸಕ್ಕಿದ್ದರು. ನೇಪಾಳ ಮೂಲದ ಸರ್ಕಾರೇತರ ಸಂಘಟನೆ ನೀಡಿದ ಮಾಹಿತಿ ಆಧಾರದ ಮೇಲೆ ಇವರನ್ನು ಮೊನ್ನೆ ಸೋಮವಾರ ರಾತ್ರಿ ಪೊಲೀಸರು ರಕ್ಷಿಸಿದ್ದಾರೆ.

ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮತ್ತು ಆತನ ಸಹಚರರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಆದರೆ ರಾಜತಾಂತ್ರಿಕ ವಿನಾಯಿತಿ ಪಡೆಯುವ ಸಾಧ್ಯತೆಯಿರುವುದರಿಂದ ಆರೋಪಿಯನ್ನು ಸೌದಿ ಅರೇಬಿಯಾ ಪ್ರಜೆ ಎಂದು  ದಾಖಲಿಸಿಕೊಳ್ಳಲಿಲ್ಲ.ಪೊಲೀಸರು ಆರೋಪಪಟ್ಟಿ ದಾಖಲಿಸಿದ ನಂತರವೇ ಸರ್ಕಾರ ಸೌದಿ ಅರೇಬಿಯಾ ಸರ್ಕಾರದ ಬಳಿ ವಿಚಾರಣೆಗೆ ಬಿಟ್ಟುಕೊಡುವಂತೆ ಕೇಳಬಹುದು.ಇಲ್ಲದಿದ್ದರೆ ಆತನ ವಿರುದ್ಧ ವಿಚಾರಣೆ ನಡೆಸಲು ಭಾರತಕ್ಕೆ ಅಧಿಕಾರವಿಲ್ಲ.

ಸೌದಿ ಅರೇಬಿಯಾದ ರಾಯಭಾರ ಕಚೇರಿ ನೇಪಾಳ ಮೂಲದ ಈ ಇಬ್ಬರು ಮಹಿಳೆಯರ ಆರೋಪವನ್ನು ತಳ್ಳಿಹಾಕಿದೆ. ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಆದರೆ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರ ವಿರುದ್ಧ ಲೈಂಗಿಕ ಹಲ್ಲೆಯಾಗಿರುವುದು ದೃಢಪಟ್ಟಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಗುರುಂಗಾವ್ ಅಪರಾಧ ವಿಭಾಗದ ಉಪ ಲೋಕಾಯುಕ್ತ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ರಾಯಭಾರ ಕಚೇರಿಯ ವಿನಾಯಿತಿ ಪಡೆಯುತ್ತಾರೆಯೇ ಎಂಬ ಕುರಿತು ಗೃಹ ಇಲಾಖೆಗೆ ಮತ್ತು ಸೌದಿ ಅರೇಬಿಯಾ ರಾಯಭಾರ ಕಚೇರಿಗೆ ಪತ್ರ ಬರೆಯಲಾಗಿದೆ. ವಿನಾಯಿತಿ ಪಡೆಯುತ್ತಿದ್ದರೆ ವಿದೇಶಾಂಗ ಸಚಿವಾಲಯದ ಆದೇಶದ ಪ್ರಕಾರ ವಿಚಾರಣೆ ನಡೆಸಲಾಗುವುದು ಎಂದು ಗುರುಗಾಂವ್ ನಗರ ಪೊಲೀಸ್ ಆಯುಕ್ತ ನವದೀಪ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com