ಗಿಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಗೆ ಸೇರಿದ ಮೂವರು ಕಾಶ್ಮೀರಿ ಪ್ರತ್ಯೇಕತಾವಾದಿಗಳು

ಮೂವರು ಹಿರಿಯ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಸಯೀದ್ ಅಲಿ ಗಿಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಗೆ ಸೇರ್ಪಡೆಯಾಗಿದ್ದಾರೆ.
ಕಾಶ್ಮೀರಿ ಪ್ರತ್ಯೇಕತಾವಾದಿ ಸಯೀದ್ ಅಲಿ ಗಿಲಾನಿ
ಕಾಶ್ಮೀರಿ ಪ್ರತ್ಯೇಕತಾವಾದಿ ಸಯೀದ್ ಅಲಿ ಗಿಲಾನಿ

ಶ್ರೀನಗರ: ಮೂವರು ಹಿರಿಯ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಸಯೀದ್ ಅಲಿ ಗಿಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಗೆ ಸೇರ್ಪಡೆಯಾಗಿದ್ದಾರೆ.

ಡೆಮಾಕ್ರೆಟಿಕ್ ಫ್ರೀಡಂ ಪಕ್ಷದ ಅಧ್ಯಕ್ಷ ಶಬೀರ್ ಶಾ ಹಾಗೂ ನ್ಯಾಷನಲ್ ಫ್ರಂಟ್ ಅಧ್ಯಕ್ಷ ಹಾಗೂ  ಶಿಯಾ ಸಮುದಾಯದ ಧರ್ಮಗುರು ಅಗಾ ಸೈಯದ್ ಹಸನ್ ಹುರಿಯತ್ ಗೆ ಸೇರಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳ ಚಳುವಳಿಗೆ ಅಡ್ಡಿ ಉಂಟಾಗುತ್ತಿದ್ದು, ಅದನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಹುರಿಯತ್ ಮುಖಂದ ಸಯೀದ್ ಅಲಿ ಗಿಲಾನಿ ಹೇಳಿದ್ದಾರೆ.

ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ಬೇಡಿಕೆ ಇರಿಸಿ ಹೋರಾಡುತ್ತಿರುವ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಹೋರಾಟದಲ್ಲಿ ಪ್ರತ್ಯೇಕತಾವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿಲಾನಿ ಅವರೊಂದಿಗೆ ಕೈ ಜೋಡಿಸಲು ಬಯಸುತ್ತಿದ್ದಾರೆ. ಪ್ರತ್ಯೇಕತಾವಾದಿಗಳು ಕಾಶ್ಮೀರ ವಿಷಯದಲ್ಲಿ ಒಂದೇ ರೀತಿಯ ನಿಲುವು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಹುರಿಯತ್ ಸಂವಿಧಾನದ ಪ್ರಕಾರವೇ ಕಾಶ್ಮೀರ ವಿವಾದವನ್ನು ಅಂತ್ಯಗೊಳಿಸಬೇಕು ಎಂದು ಶಬೀರ್ ಶಾ ಒತ್ತಾಯಿಸಿದ್ದಾರೆ. ಹಿಂದಿನ ಸರ್ಕಾರಗಳಂತೆಯೇ ಈ ಸರ್ಕಾರವೂ ಸಹ ಕಾಶ್ಮೀರಿ ನಾಯಕರ ರಾಜಕೀಯ ಸ್ಥಾನವನ್ನು ದುರ್ಬಲಗೊಳಿಸಿದೆ, ಈ ನಿಲುವು ಹೀಗೇ ಮುಂದುವರೆದಲ್ಲಿ ಭಾರತ ಸರ್ಕಾರ ಇದರ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಯೀದ್ ಅಲಿ ಗಿಲಾನಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com