ಭಾರತ-ಪಾಕ್ ಮಹಾ ನಿರ್ದೇಶಕರ ಮಟ್ಟದ ಮಾತುಕತೆ ಆರಂಭ

ಭಾರತ-ಪಾಕಿಸ್ತಾನ ಮಟ್ಟದ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಿಂತುಹೋದ ಎರಡು ವಾರಗಳ ಬಳಿಕ ಇದೀಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ-ಪಾಕಿಸ್ತಾನ ಮಟ್ಟದ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಿಂತುಹೋದ ಎರಡು ವಾರಗಳ ಬಳಿಕ ಇದೀಗ ಗುರುವಾರ ದೆಹಲಿಯಲ್ಲಿ ಮೂರು ದಿನಗಳ ಮಹಾ ನಿರ್ದೇಶಕರ ಮಟ್ಟದ ಮಾತುಕತೆ ಆರಂಭಗೊಂಡಿದೆ.
ಇಂದಿನ ಮಾತುಕತೆಯಲ್ಲಿ ಯುದ್ಧ ವಿರಾಮ ಉಲ್ಲಂಘನೆ ಮತ್ತು ಗಡಿಯೊಳಗೆ ನುಸುಳುವಿಕೆ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರುತ್ತಿವೆ. ಒಂದೂವರೆ ವರ್ಷಗಳ ನಂತರ ಇದೀಗ ಮತ್ತೆ ಮಾತುಕತೆ ನಡೆಸಲಾಗುತ್ತಿದೆ. 2013 ಡಿಸೆಂಬರ್ ನಲ್ಲಿ ಲಾಹೋರ್ ನಲ್ಲಿ ಇಂಥಹದ್ದೇ ಮಾತುಕತೆ ನಡೆಸಲಾಗಿತ್ತು.
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ. ಇಂದಿನ ಮಾತುಕತೆಗೆ 16 ಸದಸ್ಯರ ಪಾಕಿಸ್ತಾನ ನಿಯೋಗ ಆಗಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com