ಸೌದಿ ರಾಜತಾಂತ್ರಿಕ ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ

ಭಾರತದಲ್ಲಿರುವ ಸೌದಿ ಅರೇಬಿಯಾ ರಾಜ ತಾಂತ್ರಿಕ ಅಧಿಕಾರಿಯ ವಿರುದ್ಧ ಗುರ್ ಗಾಂವ್‍ನಲ್ಲಿ ಅತ್ಯಾಚಾರ ಆರೋಪ ದಾಖಲಾಗಿದೆ. ನೇಪಾಳದ...
ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆಯರು ( ಕೃಪೆ: ರಾಯಿಟರ್ಸ್ )
ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆಯರು ( ಕೃಪೆ: ರಾಯಿಟರ್ಸ್ )

ನವದೆಹಲಿ/ಗುರ್‍ಗಾಂವ್:  ಭಾರತದಲ್ಲಿರುವ ಸೌದಿ ಅರೇಬಿಯಾ ರಾಜ ತಾಂತ್ರಿಕ ಅಧಿಕಾರಿಯ ವಿರುದ್ಧ ಗುರ್ ಗಾಂವ್‍ನಲ್ಲಿ ಅತ್ಯಾಚಾರ ಆರೋಪ ದಾಖಲಾಗಿದೆ. ನೇಪಾಳದ ಇಬ್ಬರು ಮಹಿಳೆಯ ರನ್ನು 4 ತಿಂಗಳು ಕೂಡಿ ಹಾಕಿ, ಅತ್ಯಾಚಾರ ಮಾಡಿದ ಆರೋಪದಲ್ಲಿ ಅಧಿಕಾರಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ, ಸೌದಿ ಅರೇಬಿಯಾ ರಾಯಭಾರ ಕಚೇರಿಯು ಈ ಆರೋಪ ಅಲ್ಲಗಳೆದಿದ್ದು, ಇದೊಂದು ಸುಳ್ಳು ಆರೋಪ ಎಂದು ಹೇಳಿದೆ. ಈ ನಡುವೆ, ವಿದೇಶಾಂಗ ಸಚಿವಾಲಯವು ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರಿಂದ ವಿಸ್ತøತ ವರದಿ ಕೇಳಿದೆ. ಜತೆಗೆ, ವರದಿ ಸ್ವೀಕರಿಸಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.

ಮನೆ ಮೇಲೆ ದಾಳಿ: ನೇಪಾಳದ 44 ವರ್ಷ ದ ಮಹಿಳೆ ಮತ್ತು ಆಕೆಯ ಪುತ್ರಿ(20)ಯನ್ನು ರಾಜತಾಂತ್ರಿಕ ಅಧಿಕಾರಿಯು ಗುರ್ ಗಾಂವ್‍ನ ತನ್ನ ಅಪಾರ್ಟ್‍ಮೆಂಟ್‍ನಲ್ಲಿ ಕೂಡಿಹಾಕಿದ್ದನ್ನು ನೋಡಿದ್ದ ಮನೆಕೆಲಸ ದಾಕೆ, ಈ ಬಗ್ಗೆ ಎನ್‍ಜಿಒವೊಂದಕ್ಕೆ ಮಾಹಿತಿ ನೀಡಿದ್ದಳು. ಆ ಸಂಸ್ಥೆಯು ನೇಪಾಳ ರಾಯಭಾರ ಕಚೇರಿಗೆ ಈ ವಿಷಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ರಾಯಭಾರ ಕಚೇರಿ ಯು ಗುರ್‍ಗಾಂವ್ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿತ್ತು. ಅದರಂತೆ, ಸೋಮವಾರ ರಾತ್ರಿ ಅಧಿಕಾರಿಯ ಅಪಾಟ್ರ್ ಮೆಂಟ್‍ಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳವಾಗಿದ್ದು ದೃಢಪಟ್ಟಿದೆ. ಈ ಮಹಿಳೆಯರನ್ನು 4 ತಿಂಗಳ ಹಿಂದೆ ಮನೆಕೆಲಸಕ್ಕಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಒಂದು ಬಾರಿ ಇವರನ್ನು ಸೌದಿ ಅರೇಬಿಯಾಕ್ಕೂ ಕರೆದೊಯ್ದು ಅತ್ಯಾಚಾರ ಮಾಡಲಾಗಿತ್ತು. ನಂತರ ಭಾರತಕ್ಕೆ ಕರೆತಂದ ಅಧಿಕಾರಿ, ಅಪಾರ್ಟ್‍ಮೆಂಟ್‍ನಲ್ಲಿ ಇವ ರನ್ನು ಕೂಡಿ ಹಾಕಿದ್ದರು. ಅಲ್ಲಿಗೆ ಬರುತ್ತಿದ್ದ ಅತಿಥಿಗಳೂ ಈ ಅಮಾಯಕರ ಮೇಲೆ ಅತ್ಯಾಚಾರವೆಸಗುತ್ತಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com