
ಮುಂಬಯಿ: ಜುಲೈ 11 2006 ರಲ್ಲಿ ಮುಂಬಯಿ ಉಪನಗರ ರೈಲಿನಲ್ಲಿ ಬಾಂಬ್ ಸ್ಫೋಟಿಸಿ 188 ಮಂದಿ ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸಡ್ ಕ್ರೈಮ್ ಆ್ಯಕ್ಟ್ ನ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಲಿದೆ.
ಮೋಕಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯತಿನ್ ಶಿಂಧೆ ಪ್ರಕರಣ ಸಂಬಂಧ 192 ಸಾಕ್ಷಿಗಳನ್ನು ವಿಚಾರಣೆ ನಡೆಸಿ 2014 ರ ಆಗಸ್ಟ್ 19 ರಂದು ವಿಚಾರಣೆ ಮುಕ್ತಾಯಗೊಳಿಸಿದ್ದರು. ಘಟನೆ ನಡೆದ 8 ವರ್ಷಗಳ ನಂತರ ಇಂದು ಅಪರಾಧಿಗಳ ವಿರುದ್ಧ ತೀರ್ಪು ಪ್ರಕಟಿಸಲಿದ್ದಾರೆ.
ಜುಲೈ 11 ರಂದು ಮುಂಬಯಿ ಉಪನಗರ ರೈಲು ನಿಲ್ದಾಣದ ಪ್ರಥಮ ದರ್ಜೆ ಕೋಚ್ ನಲ್ಲಿ 7 ಆರ್ ಡಿಎಕ್ಸ್ ಬಾಂಬ್ ಇರಿಸಿ ಸ್ಫೋಟಿಸಲಾಗಿತ್ತು. 188 ಮಂದಿ ಸಾವನ್ನಪ್ಪಿ 829 ಜನ ತೀವ್ರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಎಂಡು ಐಪಿಎಸ್, 5, ಐಎಎಸ್ ಅಧಿಕಾರಿಗಳು, 18 ವೈದ್ಯರನ್ನು ಸೇರಿ ಒಟ್ಟು 193 ಸಾಕ್ಷಿಗಳ ವಿಚಾರಣೆ ನಡೆದಿತ್ತು. 5.500 ಪುಟಗಳ ತೀರ್ಪನ್ನು ಇಂದು ನ್ಯಾಯಾಲಯ ಪ್ರಕಟಿಸಲಿದೆ.
Advertisement