ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ 700 ಮಂದಿ ಅಸ್ವಸ್ತ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ 500ಕ್ಕೂ ಹೆಚ್ಚು ಕೆಡೆಟ್ ಗಳು ಅಸ್ವಸ್ತಗೊಂಡಿದ್ದು ಆಸ್ಪತ್ರೆಗೆ...

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ 500ಕ್ಕೂ ಹೆಚ್ಚು ಕೆಡೆಟ್ ಗಳು ಅಸ್ವಸ್ತಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಖಡಕ್ ವಾಸ್ಲಾ ಎಂಬಲ್ಲಿ ನಡೆದಿದೆ.

ಕಲುಷಿತ ಆಹಾರ ಸೇವಿಸಿ ಸುಮಾರು 700 ಕೆಡೆಟ್ ಗಳು ಅಸ್ವಸ್ತಗೊಂಡಿದ್ದರು. ಹೆಚ್ಚು ಮಂದಿ ಅಸ್ವಸ್ತಗೊಂಡಿದ್ದರಿಂದ ಆಂಬುಲೆನ್ಸ್ ನ ಸೇವೆ ಸರಿಯಾಗಿ ಲಭ್ಯವಾಗದೇ, ಅಧಿಕಾರಿಗಳ ವೈಯಕ್ತಿಕ ವಾಹನಗಳಲ್ಲಿ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ತರಬೇತಿಗಾರರು ಸೇವಿಸಿದಂತ ಮೊಟ್ಟೆ ಗೊಜ್ಜಿನಲ್ಲಿ ವಿಷದ ಅಂಶ ಇರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಡೆಟ್ ಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com