
ಮುಂಬಯಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಉದ್ಯಮಿ ರತನ್ ಟಾಟಾ ಕೇಂದ್ರ ಸರ್ಕಾರದ ಕ್ಷಯರೋಗ ಮುಕ್ತ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೈ ಜೋಡಿಸಿದ್ದಾರೆ.
ಅಮಿತಾಬ್ ಬಚ್ಚನ್ ಹಾಗೂ ರತನ್ ಟಾಟಾ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷಯರೋಗ ಮುಕ್ತ ಭಾರತ ಅಭಿಯಾನದಲ್ಲಿ ಕಾರ್ಪೋರೇಟರ್ ಕಂಪನಿಗಳು ಪ್ರೋತ್ಸಾಹ ನೀಡುವಂತೆ ಕೇಳಿದರು. ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಭಾಗವಹಿಸಿರುವುದಕ್ಕೆ ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ ಸಂತಸ ವ್ಯಕ್ತ ಪಡಿಸಿದರು.
ಇನ್ನು ಈ ವೇಳೆ ಮಾತನಾಡಿದ ನಟ ಅಮಿತಾಬ್ ಬಚ್ಚನ್ ಈ ಹಿಂದೆಯೂ ತಾವು ಕ್ಷಯ ರೋಗ ನಿರ್ಮೂಲನೆಗಾಗಿ ಮುಂಬಯಿ ಮಹಾನಗರ ಪಾಲಿಕೆ ಜೊತೆ ಕೆಲಸ ಮಾಡಿದ್ದೇನೆ. ಇನ್ನೂ ಅನೇಕ ಚಿತ್ರಗಳಲ್ಲೂ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿದ್ದೇವೆ ಎಂದರು. ರಿಚರ್ಡ್ ವರ್ಮ ಈ ಅಭಿಯಾನದ ಬಗ್ಗೆ ತಮ್ಮ ಬಳ್ ಪ್ರಸ್ತಾಪಿಸಿದಾಗ ವಯಕ್ತಿಕವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಬೆಂಬಲ ನೀಡುವುದಾಗಿ ತಿಳಿಸಿದರು.
2000ನೇ ಇಸವಿಯಲ್ಲಿ ನಾನು ಕೂಡ ಕ್ಷಯರೋಗದಿಂದ ಬಳಲುತ್ತಿದ್ದೆ. ಟಿಬಿ ಇದ್ದದ್ದು ನನಗೆ ತಿಳಿದಿರಲಿಲ್ಲ. ಆಕಸ್ಮಿಕವಾಗಿ ಗೊತ್ತಾಯಿತು. ನಾನು ಈ ರೋಗಕ್ಕೆ ಯಾವುದೇ ಔಷಧಿ ತೆಗೆದುಕೊಂಡಿಲ್ಲ. ಕಾಯಿಲೆಗೆ ದೀರ್ಘ ಕಾಲದಲ್ಲಿ ಹೆತ್ತಿನ ಪ್ರಮಾಣದಲ್ಲಿ ಔಷಧಿ ಸೇವನೆ ಮಾಡಬೇಕು ಎಂದರು. ಈಗ ನಾನು ಕ್ಷಯರೋಗದಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದು ಆರೋಗ್ಯವಾಗಿದ್ದೇನೆ ಎಂದರು.
ಈ ವೇಳೆ ಮಾತನಾಡಿದ ಉದ್ಯಮಿ ರತನ್ ಟಾಟಾ ಕ್ಷಯರೋಗ ಸೈಲೆಂಟ್ ಕಿಲ್ಲರ್. ಭಾರತದ ಪ್ರಜೆಯಾಗಿ ನಾನು ಕ್ಷಯರೋಗ ನಿರ್ಮೂಲನೆಗಾಗಿ ಕಟಿಬದ್ದನಾಗಿ ಸರ್ಕಾರಗ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
Advertisement