ಮುಸಲ್ಮಾನರಿಗಾಗಿ ಮಸೀದಿ ಕಟ್ಟಿಸಿದ ಸಿಖ್ ರೈತ

ಮಾನವೀಯತೆ ಇನ್ನೂ ಹಲವಡೆ ಬದುಕಿದೆ ಎಂಬುದಕ್ಕೆ ನಿದರ್ಶನ. ಪಂಜಾಬ್ ನ ಸರ್ವಾಪುರ್ ಗ್ರಾಮದ ರೈತ ನೊಬ್ಬ ಅಲ್ಲಿನ ಮುಸಲ್ಮಾನರಿಗಾಗಿ ಮಸೀದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಮೃತಸರ: ಮಾನವೀಯತೆ ಇನ್ನೂ ಹಲವಡೆ ಬದುಕಿದೆ ಎಂಬುದಕ್ಕೆ ನಿದರ್ಶನ. ಪಂಜಾಬ್ ನ ಸರ್ವಾಪುರ್ ಗ್ರಾಮದ ರೈತ ನೊಬ್ಬ ಅಲ್ಲಿನ ಮುಸಲ್ಮಾನರಿಗಾಗಿ ಮಸೀದಿ ಕಟ್ಟಿಸಿ ಮಾನವೀಯತೆ ಮೆರೆದಿದ್ದಾನೆ.

ಸರ್ವಾಪುರ್ ನಲ್ಲಿ ಸುಮಾರು ಮುಸ್ಲಿಂ ಕುಟುಂಬಗಳಿದ್ದು, ತಮ್ಮ ಪ್ರಾರ್ಥನೆಗಾಗಿ ಇಲ್ಲಿನ ಜನ ಸುಮಾರು 10 ಕೀಮಿ ದೂರ ಪ್ರಯಾಣ ಮಾಡಬೇಕಾಗಿತ್ತು. ಇದನ್ನು ನೋಡಿದ ಸಿಖ್ ಜನಾಂಗದ ಜೋಗ ಸಿಂಗ್ ಎಂಬ ಶ್ರೀಮಂತ ತನ್ನ ಗ್ರಾಮದಲ್ಲೇ ಮುಸ್ಲಿಮರಿಗಾಗಿ ಮಸೀದಿ ನಿರ್ಮಿಸಿದ್ದಾನೆ.

ಈ ಹಿಂದೆ ಈ ಗ್ರಾಮದಲ್ಲೂ ಮಸೀದಿ ಯಿತ್ತು. ಆದರೆ ಯಾವುದೋ ದಾಳಿ ಗಲಭೆ ವೇಳೆ ಮಸೀದಿ ಧ್ವಂಸವಾಗಿತ್ತು. ಹೀಗಾಗಿ ಇಲ್ಲಿನ ಜನ ಪಕ್ಕದ ಗ್ರಾಮಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ಜೋಗಸಿಂಗ್ ಕೆಲಸವನ್ನು ಸ್ಥಳೀಯ ಮುಸ್ಲಿಮರು ಪ್ರಶಂಸಿದ್ದಾರೆ. ಸಿಖ್ ಸಹೋದರರಿಂದ ತಮಗೆ ಮಸೀದಿ ನಿರ್ಮಾಣವಾಯಿತು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ತಮ್ಮ ಊರಿನಲ್ಲಿ ಮಸೀದಿ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com