ಪರ್ವನೋ (ಶಿಮ್ಲಾ): ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರವಾಸಿಗರ ವಿಶೇಷ ರೈಲು ಹಳಿ ತಪ್ಪಿದ ಪರಿಣಾಮ ವಿದೇಶಿ ಪ್ರವಾಸಿಗರಿಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಇಂದು ಮಧ್ಯಾಹ್ನ 12.15 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕಲ್ಕಾದಿಂದ ಶಿಮ್ಲಾ ಗೆ ತೆರಳತ್ತಿದ್ದ ನಾಲ್ಕು ಬೋಗಿಗಳ ರೈಲು ತಕ್ಸಾಲ್ ಎಂಬಲ್ಲಿ ತಿರುವಿನಲ್ಲಿ ಹಳಿ ತಪ್ಪಿದೆ ಎಂದು ಉತ್ತರ ರೈಲ್ವೇ ವಿಭಾಗದ ಸಿಪಿಆರ್‌ಓ ನೀರಜ್ ಶರ್ಮಾ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.