6 ತಿಂಗಳಲ್ಲಿ 50,000 ಕಿಮೀ ಹೈವೇ ವಿಸ್ತರಣೆಗೆ ಕೇಂದ್ರ ಸರ್ಕಾರ ತೀರ್ಮಾನ

ಆರು ತಿಂಗಳೊಳಗೆ ರಾಷ್ಟ್ರೀಯ ಹೆದ್ದಾರಿಯನ್ನು 50,000 ಕಿಮೀ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆರು ತಿಂಗಳೊಳಗೆ ರಾಷ್ಟ್ರೀಯ ಹೆದ್ದಾರಿಯನ್ನು 50,000 ಕಿಮೀ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೇರಿದ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾಡಿದ ವಿಸ್ತರಣೆಯು ಹಿಂದಿನ ಎನ್ ಡಿಎ ಸರ್ಕಾರ 6 ವರ್ಷಗಳ ಅಧಿಕಾರವಧಿಯಲ್ಲಿ ಮಾಡಿದ ಹೆದ್ದಾರಿ ವಿಸ್ತರಣೆಯ ಎರಡು ಪಟ್ಟುಗಳಷ್ಟಾಗಲಿದೆ. ಅಷ್ಟೇ ಅಲ್ಲ, 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯ ಮೂರು ಪಟ್ಟು ವಿಸ್ತರಣೆ ಈಗ 6 ತಿಂಗಳಲ್ಲಿ ನಡೆಯಲಿದೆ.

 ಪ್ರಸ್ತುತ ದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಉದ್ದ ಒಂದು ಲಕ್ಷ ಕಿಲೋಮೀಟರ್  ನಷ್ಟಿದೆ. ಕಳೆದ 15 ತಿಂಗಳೊಳಗೆ ಮೋದಿ ಸರ್ಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯ ಉದ್ದ 7,000 ಕಿಲೋಮೀಟರ್ಗಿಂತ ಅಧಿಕವಾಗಿದೆ. ಮುಂದಿನ ತಿಂಗಳುಗಳಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1.5  ಲಕ್ಷ ದಾಟಲಿದೆ ಎಂದು ಕೇಂದ್ರ ಸಾರಿಗೆ ಸಂಪರ್ಕ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದ  1998 ರಿಂದ 2004ರ ಕಾಲಾವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ 23,814 ಕಿಮೀ ರಸ್ತೆ ನಿರ್ಮಾಣವಾಗಿತ್ತು. ಅದರ ನಂತರ ಅಧಿಕಾರಕ್ಕೇರಿದ ಯುಪಿಎ 18,000 ಕಿಮೀ ರಸ್ತೆ ನಿರ್ಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com