
ಪಾಟ್ನಾ: ರು.4 ಲಕ್ಷ ಬೇನಾಮಿ ಹಣ ಹೊಂದಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಪುತ್ರ ಶುಭಂ ಮಾಂಜಿ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶುಭಂ ಮಾಂಜಿ ಕಾರಿನಲ್ಲಿ ಬೇನಾಮಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶುಭಂ ಅವರ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದರು. ಇಲ್ಲಿನ ಜೆಹಾನಾಬಾದ್ ಜಿಲ್ಲೆಯ ಮಖ್‌ದಂಪುರ್ ಬಳಿಯ ಧಾರ್‌ನೈ ಗ್ರಾಮದಲ್ಲಿ ಕಾರು ತಪಾಸಣೆಗೊಳಪಡಿಸಿದ್ದು, ಅದರಲ್ಲಿ ರು. 4,65,000 ಪತ್ತೆಯಾಗಿದೆ.
ಶುಭಂ ಅವರನ್ನು ಮಖ್‌ದಂಪುರ್ ಪೊಲೀಸ್ ಠಾಣೆಗೆ ಒಯ್ಯಲಾಗಿದ್ದು, ಅವರನ್ನೀಗ ವಿಚಾರಣೆಗೊಳಪಡಿಸಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.
ಬಿಹಾರದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬೇನಾಮಿ ಹಣಕ್ಕೂ ಇದಕ್ಕೂ ಏನಾದರೂ ನಂಟು ಇದೆಯೆ? ಎಂಬ ಶಂಕೆ ಇಲ್ಲಿ ವ್ಯಕ್ತಪಡಿಸಲಾಗಿದೆ.
Advertisement