ಜಬುವಾ ಸ್ಫೋಟಕ್ಕೆ ಜೆಲಿಟಿನ್ ಕಡ್ಡಿಗಳು ಕಾರಣ: ಪೊಲೀಸ್

ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಸ್ಫೋಟಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ, ಜೆಲಿಟಿನ್ ಕಡ್ಡಿಗಳು ಎಂದು ಪೊಲೀಸರು ತಿಳಿಸಿದ್ದಾರೆ...
ಜೆಲಿಟಿನ್
ಜೆಲಿಟಿನ್
ಜಬುವಾ: ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಸ್ಫೋಟಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ, ಜೆಲಿಟಿನ್ ಕಡ್ಡಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಜಬುವಾ ಜಿಲ್ಲೆಯ ಪೆಟಲ್ವಾಡದ ಎರಡು ಅಂತಸ್ಥಿನ ಕಟ್ಟಡದಲ್ಲಿ ಇರುವ ರೆಸ್ಟೋರೆಂಟ್ ನಲ್ಲಿ ಸ್ಫೋಟ ಸಂಭವಿಸಿ  90 ಮಂದಿ ಮೃತಪಟ್ಟು, 150ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದರು.
ಕಟ್ಟಡದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಶೇಖರಿಸಿದ್ದ ಜೆಲಿಟಿನ್ ಕಡ್ಡಿಗಳಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದು, ಅಂಗಡಿ ಮಾಲೀಕ ರಾಜೇಂದ್ರ ಕಸ್ವಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ರಾಜೇಂದ್ರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. 
ಮೃತ ಕುಟುಂಬಕ್ಕೆ 10 ಲಕ್ಷ ಘೋಷಿಸಿದ ಸಿಎಂ
ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಜೌಹಾಣ್ ಭೇಟಿ ನೀಡಿದರು. ಈ ವೇಳೆ ಮೃತ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com