
ಥಾಣೆ: ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಗೋಮಾಂಸ ನಿಷೇಧಿಸಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ರಸ್ತೆಯಲ್ಲಿ ಚಿಕನ್ ಸುಟ್ಟು ಪ್ರತಿಭಟನೆ ನಡೆಸಿದೆ.
ಥಾಣೆಯಲ್ಲಿನ ಜೈನ ಸಮುದಾಯದವರ ಸಭಾಂಗಣವೊಂದರಲ್ಲಿ ಸೇರಿದ್ದ ಜೈನರು ಹೊರಗೆ ಬರುವ ವೇಳೆ ನವ ನಿರ್ಮಾಣ ಸೇನೆಯ ಸುಮಾರು 50 ಮಂದಿ ಸದಸ್ಯರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಆದರೆ ಜೈನರು ಇದನ್ನೆಲ್ಲಾ ಕಡೆಗಣಿಸಿ ಮೌನವಾಗಿ ಅಲ್ಲಿಂದ ಹೊರ ನಡೆದಿದ್ದಾರೆ.
ಎಂಎನ್‌ಎಸ್ ಉಪಾಧ್ಯಕ್ಷ ರವಿ ಮೋರೆ, ಮಹೇಶ್ ಕದಂ, ರಾಜು ಭಾಗ್ವೆ, ಆಶಿಶ್ ದೋಕೆ ಮೊದಲಾದವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
Advertisement