ಇನ್ಮುಂದೆ ರೈಲಿನಲ್ಲಿ ವಾಕ್ಯೂಮ್ ಟಾಯ್ಲೆಟ್!

ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವರು ಗಬ್ಬು ನಾತ ಬೀರುವ ಟಾಯ್ಲೆಟ್‌ಗಳನ್ನು ಬಳಸಿ ಕಷ್ಟಪಡಬೇಕೆಂದಿಲ್ಲ. ಇದೀಗ ರೈಲ್ವೇ ಇಲಾಖೆ ರೈಲುಗಳಲ್ಲಿ ವಾಕ್ಯೂಮ್ ಟಾಯ್ಲೆಟ್‌ಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವರು ಗಬ್ಬು ನಾತ ಬೀರುವ ಟಾಯ್ಲೆಟ್‌ಗಳನ್ನು ಬಳಸಿ ಕಷ್ಟಪಡಬೇಕೆಂದಿಲ್ಲ. ಇದೀಗ ರೈಲ್ವೇ ಇಲಾಖೆ ರೈಲುಗಳಲ್ಲಿ ವಾಕ್ಯೂಮ್ ಟಾಯ್ಲೆಟ್‌ಗಳನ್ನು ಅಳವಡಿಸಲು ಮುಂದಾಗಿದ್ದು, ಸೋಮವಾರದಿಂದ  ದಿಬ್ರುಗಢ್  ರಾಜಧಾನಿ ರೈಲಿನಲ್ಲಿ ವಾಕ್ಯೂಮ್ ಟಾಯ್ಲೆಟ್ ಬಳಕೆಯಾಗಲಿದೆ.

ರೈಲ್ವೇಯಲ್ಲೇ ಪ್ರಥಮ ಬಾರಿಗೆ ವಾಕ್ಯೂಮ್ ಟಾಯ್ಲೆಟ್ ಗಳನ್ನು ಅಳವಡಿಸಿದ್ದು ಸೆಪ್ಟೆಂಬರ್ 14ರಂದು ದಿಬ್ರುಗಢ್ ರಾಜಧಾನಿ ರೈಲಿನಲ್ಲಿ ಇದು ಬಳಕೆಯಾಗಲಿದೆ ಎಂದು ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೈಲಿನ ಫಸ್ಟ್ ಎಸಿ ಕೋಚ್‌ನಲ್ಲಿ ವಾಕ್ಯೂಮ್ ಟಾಯ್ಲೆಟ್ ಅಳವಡಿಸಿದ್ದು, ಈ ಯೋಜನೆಗೆ ರು. 3 ಲಕ್ಷ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಈ ವಾಕ್ಯೂಮ್ ಟಾಯ್ಲೆಟ್‌ನವ್ವಿ ಬಯೋ ಡೈಜೆಸ್ಟರ್ ಸಿಸ್ಟಂ ಕೂಡಾ ಇದೆ.

ವಾಕ್ಯೂಮ್ ಟಾಯ್ಲೆಟ್‌ಗಳನ್ನು ವಿಮಾನದಲ್ಲಿ ಬಳಸಲಾಗುತ್ತಿದ್ದು, ಇನ್ಮುಂದೆ ರೈಲುಗಳಲ್ಲಿ ಬಳಸಲು ರೇಲ್ವೇ ಇಲಾಖೆ ತೀರ್ಮಾನಿಸಿದೆ.

ಈ ಯೋಜನೆಯ ಪ್ರಕಾರ ಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ 80 ವಾಕ್ಯೂಮ್ ಟಾಯ್ಲೆಟ್ ಗಳನ್ನು ಅಳವಡಿಸಲು ಇಲಾಖೆ ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com