ತಪಾಸಣೆಯಿಂದ ವಿನಾಯಿತಿ: ಸೌಲಭ್ಯ ಹಿಂತೆಗೆದುಕೊಳ್ಳಲು ರಾಬರ್ಟ್ ವಾದ್ರಾ ಒತ್ತಾಯ

ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುವುದರಿಂದ ವಿನಾಯಿತಿ ನೀಡುವ ಆಯ್ದ ಅತಿ ಗಣ್ಯ ವ್ಯಕ್ತಿಗಳ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ...
ರಾಬರ್ಟ್ ವಾದ್ರಾ(ಸಂಗ್ರಹ ಚಿತ್ರ)
ರಾಬರ್ಟ್ ವಾದ್ರಾ(ಸಂಗ್ರಹ ಚಿತ್ರ)

ನವದೆಹಲಿ: ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವುದರಿಂದ ವಿನಾಯಿತಿ ನೀಡುವ ಆಯ್ದ ಅತಿ ಗಣ್ಯ ವ್ಯಕ್ತಿಗಳ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ ಪ್ರಿಯಾಂಕ ಗಾಂಧಿ ಪತಿ, ರಾಬರ್ಟ್ ವಾದ್ರಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾವು ಅತಿ ಗಣ್ಯ ವ್ಯಕ್ತಿಯಲ್ಲ, ಆದುದರಿಂದ ತಮ್ಮ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಹೇಳಿರುವ ಅವರು, ತಮ್ಮ ಹೆಸರಿಗೆ ಧಕ್ಕೆಯನ್ನುಂಟುಮಾಡಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಿಕೆಯೊಂದಕ್ಕೆ ಮಾತನಾಡಿರುವ ಅವರು, ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ನಾನು ಗಣ್ಯ ಅಥವಾ ಅತಿ ಗಣ್ಯ ವ್ಯಕ್ತಿಯಲ್ಲ. ನನ್ನನ್ನು ಸಾಮಾನ್ಯನಂತೆ ಪರಿಗಣಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಸಾಮಾನ್ಯ ಪ್ರಜೆಯಂತೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಭದ್ರತಾ ತಪಾಸಣೆಗೆ ಒಳಗಾಗಲು ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿ ನಿಲ್ದಾಣಕ್ಕೆ ಹೋಗಿ ಅಧಿಕಾರಿಗಳಿಗೆ ಹೇಳಿ ಹೆಸರು ತೆಗೆದು ಹಾಕಿಸಲೂ ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ರಾಬರ್ಟ್ ವಾದ್ರಾ ಅವರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ವಿನಾಯಿತಿ ನೀಡುವ ಕುರಿತು ಇತ್ತೀಚೆಗೆ ವಿವಾದವೇರ್ಪಟ್ಟಿತ್ತು. ರಾಬರ್ಟ್ ವಾದ್ರಾ ಅವರ ಹೆಸರನ್ನು ವಿವಿಐಪಿ ಪಟ್ಟಿಯಿಂದ ತೆಗೆದುಹಾಕುವ ಯಾವುದೇ ಯೋಜನೆಯಿಲ್ಲ ಎಂದು ಇತ್ತೀಚೆಗೆ ಸರ್ಕಾರ ಸ್ಪಷ್ಟಪಡಿಸಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com