
ಮುಂಬೈ: ಬಾಂಬೆ ಹೈಕೋರ್ಟ್ ಸೋಮವಾರ ಮಾಂಸ ಮಾರಾಟ ನಿಷೇಧ ಆದೇಶಕ್ಕೆ ತಡೆ ನೀಡಿದ್ದು, ಮಾಂಸ ಪ್ರಿಯರು ನಿರಾಳವಾಗಿದ್ದಾರೆ.
ಮಾಂಸ ಮಾರಾಟ ನಿಷೇಧ ಪ್ರಶ್ನಿಸಿ ಮಾಂಸ ಮಾರಾಟಗಾರರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಆದೇಶಕ್ಕೆ ತಡೆ ನೀಡಿ, ಸೆಪ್ಟೆಂಬರ್ 17ರಂದು ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಗೋಮಾಂಸ ನಿಷೇಧ ಆದೇಶಕ್ಕೆ ಸಂಬಂಧಿಸಿದಂತೆ ಮಧ್ಯೆ ಪ್ರವೇಶಿಸಲು ಕೋರ್ಟ್ ನಿರಾಕರಿಸಿದೆ.
ಜೈನ ಧರ್ಮೀಯರ ಉಪವಾಸ ಆಚರಣೆ (ಪರ್ಯೂಷನ್) ಪ್ರಯುಕ್ತ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸೆಪ್ಟೆಂಬರ್ 10, 13, 17 ಮತ್ತು 18ರಂದು ಮಾಂಸ ಮಾರಾಟಕ್ಕೆ ನಿಷೇಧ ಹೇರಿತ್ತು. ಆದರೆ ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಜಿಸಿದ ಹಿನ್ನೆಲೆಯಲ್ಲಿ ಬಿಎಂಸಿ ಸೆಪ್ಟೆಂಬರ್ 17ರಂದು ಮಾತ್ರ ನಿಷೇಧ ವಿಧಿಸಿತ್ತು.
Advertisement