ಎಲ್‍ಇಡಿ ಬಲ್ಬ್ ಅಗ್ಗಗೊಳಿಸಲು ಸರ್ಕಾರ ಯತ್ನ

ವಿದ್ಯುತ್ ಮಿತಬಳಕೆಯ ಉದ್ದೇಶದಿಂದ ಹಳೆಯ ಫಿಲಾಮೆಂಟ್ ಬಲ್ಬ್‍ಗಳ ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿದ್ಯುತ್ ಮಿತಬಳಕೆಯ ಉದ್ದೇಶದಿಂದ ಹಳೆಯ ಫಿಲಾಮೆಂಟ್ ಬಲ್ಬ್‍ಗಳ ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಎಲ್ ಇಡಿ ಬಲ್ಬ್ ಬೆಲೆಯನ್ನು ರು. 44ಕ್ಕೆ ತಗ್ಗಿಸುವ ಮೂಲಕ ಅವುಗಳ ಬಳಕೆ ಉತ್ತೇಜಿಸಲು ಮುಂದಾಗಿದೆ.

ಸದ್ಯ ರು. 300 ಆಸುಪಾಸಿನ ದರದಲ್ಲಿ ಮಾರಾಟವಾಗುತ್ತಿರುವ ಎಲ್‍ಇಡಿ ಬಲ್ಬ್ ಗಳು ಜನಸಾಮಾನ್ಯರ ಕೈಗೆಟಕುವಂತಿಲ್ಲ. ಹಾಗಾಗಿ ದೇಶದಲ್ಲಿ ಸದ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಫಿಲಾಮೆಂಟ್ ಬಲ್ಬ್‍ಗಳಿಂದಾಗಿ ಭಾರಿ ವಿದ್ಯುತ್ ಹೊರೆ ಬೀಳುತ್ತಿದೆ.

ಈ ಹಿನ್ನೆಲೆಯಲ್ಲಿ ಫಿಲಾಮೆಂಟ್ ಬಲ್ಪ್ ಬಳಕೆ ಸ್ಥಗಿತಗೊಳಿಸುವ ಉದ್ದೇಶದಿಂದ ಇಂಧನ ಸಚಿವಾಲಯ ಮುಂದಾಗಿದೆ. ಸಮರ್ಥ ಗೃಹ ಬೆಳಕು ಯೋಜನೆ (ಡಿಇಎಲ್‍ಪಿ)ಯಡಿ ಎಲ್‍ಇಡಿ ಬಲ್ಪ್ ಬೆಲೆಯನ್ನು ಪ್ರತಿ ಯುನಿಟ್‍ಗೆ ರು.44ಕ್ಕೆ ತಗ್ಗಿಸಲು ಸಿದ್ಧತೆ ನಡೆಸಿದೆ ಎಂದು ಇಂಧನ ಸಚಿವ ಪಿಯೂಷ್ ಗೋಯಲ್ ಇತ್ತೀಚಿನ ಅಸೋಚಮ್ ಸಂವಾದದಲ್ಲಿ ಹೇಳಿದ್ದಾರೆ. ಡಿಇಎಲ್‍ಪಿ ಯೋಜನೆಯಡಿ ಸರ್ಕಾರ ಸ್ಪರ್ಧಾತ್ಮಕ ಹರಾಜಿನಲ್ಲಿ ಸಗಟು ಖರೀದಿ ಮಾಡಿ, ಎಲ್‍ಇಡಿ ಬಲ್ಬ್‍ಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತದೆ.

ಸದ್ಯ ದೇಶದಲ್ಲಿ ಎಲ್‍ಇಡಿ ಬಲ್ಬ್ ಬೆಲೆ ಯೂನಿಟ್‍ಗೆ ರು.275-300 ಇದೆ. ಆದರೆ, ಸರ್ಕಾರ ಇತ್ತೀಚೆಗೆ ಹರಾಜಿನಲ್ಲಿ ರು.74ರ ದರ ನಮೂದಾಗಿದ್ದು, ನಿರೀಕ್ಷಿತ ರು.99ಗಿಂತ ತೀರಾ ಕಡಿಮೆ ದರಕ್ಕೆ ಖರೀದಿ ಸಾಧ್ಯವಿದೆ. ಅಲ್ಲದೆ, ಸರ್ಕಾರದ ಯೋಜನೆಯಡಿ ಗ್ರಾಹಕರಿಗೆ ಕಂತುಗಳ ಮೂಲಕ ಬಲ್ಬ್ ಹಣ ತುಂಬುವ ಅವಕಾಶವೂ ಇದೆ.

ಸ್ಮಾರ್ಟ್ ಎಲ್‍ಇಡಿ!: ವಿಸಿಬಲ್ ಲೈಟ್ ಸಿಗ್ನಲ್ ಗ್ರಹಿಸುವ ಮತ್ತು ರವಾನಿಸುವ ವಿಶೇಷ ತಂತ್ರಾಂಶ ಅಳವಡಿಸಲಾದ ಎಲ್ ಇಡಿ ಬಲ್ಬ್‍ಗಳನ್ನು ಇಂಟರ್‍ನೆಟ್ ಮೂಲಕ ಸಂಪರ್ಕಿಸಿ ವಿವಿಧ ಸಂದೇಶ, ಕೆಲಸಗಳನ್ನು ನಿರ್ವಹಿಸುವ ಹೊಸ ಸ್ಮಾರ್ಟ್ ಎಲ್ ಇಡಿಯನ್ನು ಡಿಸ್ನಿ ರೀಸರ್ಚರ್ಸ್ ಅಬಿsವೃದ್ಧಿಪಡಿಸಿದ್ದಾರೆ.

ಬೆಳಕಿನ ಮೂಲಕ ಸಂದೇಶ ರವಾನಿಸಿ ಗೊಂಬೆಗಳು, ವಿವಿಧ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣ ಮುಂತಾದವನ್ನು ನಿಯಂತ್ರಿಸುವ ಸಾಧನವಾಗಿ ರೇಡಿಯೋ ತರಂಗಾಂತರಕ್ಕೆ ಬದಲಾಗಿ ಬೆಳಕಿನ ತರಂಗಾಂತರ ಮೂಲಕ ಇಂಟರ್‍ನೆಟ್ ಸಂಪರ್ಕಿತ ಎಲ್‍ಇಡಿ ಬಲ್ಪುಗಳನ್ನು ಬಳಸುವ ನಿಟ್ಟಿನಲ್ಲಿ ಡಿಸ್ನಿ ರೀಸರ್ಚರ್ಸ್‍ನ ಮಹತ್ವದ ಹೆಜ್ಜೆ ಇದು ಎಂದು ಸಂಸ್ಥೆಯ ಸ್ಟೇಫನ್ ಮನ್‍ಗೋಲ್ಡ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com