ಬಿಹಾರ ಚುನಾವಣೆ: ಎಲ್ಲಾ ಮತಗಟ್ಟೆಗೂ ಅರೆಸೇನಾಪಡೆ ನಿಯೋಜನೆ; ಇಸಿ

ಇದೇ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 62,779 ಮತಗಟ್ಟೆಗಳಿಗೂ ಕೇಂದ್ರದ ಅರೆಸೇನಾಪಡೆ ನಿಯೋಜಿಸಲಾಗುತ್ತಿದೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇದೇ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 62,779 ಮತಗಟ್ಟೆಗಳಿಗೂ ಕೇಂದ್ರದ ಅರೆಸೇನಾಪಡೆ ನಿಯೋಜಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.

ಚುನಾವಣೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು, 323 ವೀಕ್ಷಕರನ್ನು 243 ಸಾಮಾನ್ಯ ವೀಕ್ಷಕರನ್ನು ಮತ್ತು 80 ಖರ್ಚು ವೀಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲದೆ ಮತದಾನದ ವೇಳೆ ವಿದ್ಯುತ್ ಕಡಿತವಾದರೆ, ಸೋಲಾರ್ ಲ್ಯಾಂಪ್‌ಗಳನ್ನು ಬಳಸಲಾಗುವುದು ಎಂದು ಆಯೋಗ ಹೇಳಿದೆ.

ಯಾವುದೇ ಒಂದೇ ಒಂದು ಮತಗಟ್ಟೆಯೂ ಬಿಡದಂತೆ ಶೇ.100ರಷ್ಟು ಮತಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಅರೆಸೇನಾಪಡೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಎಲ್ಲಾ ಮತಗಟ್ಟೆಗಳಲ್ಲೂ ಅರೆಸೇನಾಪಡೆ ನಿಯೋಜಿಸುತ್ತಿರುವುದು ಇದೇ ಮೊದಲು ಎಂದು ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ಕ್ಯೂ ನೋಡಿಕೊಳ್ಳಲು ಹಾಗೂ ಇತರೆ ಕಾರ್ಯಗಳಿಗೆ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಐದು ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 12ರಂದು ಮೊದಲ ಹಂತ ಹಾಗೂ ನವೆಂಬರ್ 5ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಸೆಪ್ಟೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com