ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ.
ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ಕ್ಕೆ ಕೇವಲು 40 ಸ್ಥಾನಗಳನ್ನು ನೀಡಿರುವುದನ್ನು ನೋಡಿ ಪಕ್ಷಕ್ಕೆ ಆಘಾತವಾಗಿದೆ. ಆದರೆ ಸ್ಥಾನ ಹಂಚಿಕೆ ಬಗ್ಗೆ ಬೇಸರವಿಲ್ಲ ಎಂದು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಸ್ವಾನ್, 'ಸೋಮವಾರ ಎನ್‌ಡಿಎ ಮಿತ್ರ ಪಕ್ಷಗಳಿಗೆ ನೀಡಿದ ಸ್ಥಾನಗಳನ್ನು ನೋಡಿ ನಮಗೆ ಆಘಾತವಾಯಿತು' ಎಂದಿದ್ದಾರೆ.
'ಸ್ಥಾನ ಹಂಚಿಕೆ ಬಗ್ಗೆ ಎಲ್‌ಜೆಪಿಗೆ ಸ್ವಲ್ಪ ಅಸಮಾಧಾನ ಇದೆ. ಆದರೆ ಇದರಿಂದ ಬೇಸರ ಏನೂ ಇಲ್ಲ' ಎಂದು ಅವರು ಹೇಳಿದ್ದಾರೆ.
Advertisement