
ನವದೆಹಲಿ: ದೆಹಲಿ ಮೂಲದ ದೂರವಾಣಿ ಸೇವೆ ಸಂಸ್ಥೆ ಮೈಆಪರೇಟರ್ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೂರವಾಣಿ ಸೇವೆಗಳನ್ನು ಒದಗಿಸಲಿದೆ.
ಪ್ರಧಾನಿ ಮೋದಿ ಅವರೊಂದಿಗೆ ಮನ್ ಕಿ ಬಾತ್ ನಲ್ಲಿ ಮಾತನಾಡುವುದಕ್ಕಾಗಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದ ಟೋಲ್ ಫ್ರೀ ನಂಬರನ್ನು ಮೈಆಪರೇಟರ್ ಸಂಸ್ಥೆ ನಿರ್ವಹಣೆ ಮಾಡಲಿದೆ. ಈ ಹಿಂದೆ ಮನ್ ಕಿ ಬಾತ್ ನಲ್ಲಿ ಚರ್ಚೆಯಾಗಬೇಕಿರುವ ಸಮಸ್ಯೆಗಳು, ಸಲಹೆಗಳನ್ನು ಮೈಗೌರ್ನೆನ್ಸ್ ವೆಬ್ ಸೈಟ್ ಮೂಲಕ ಪ್ರಧಾನಿ ಅವರಿಗೆ ತಲುಪಿಸಬೇಕಿತ್ತು. ಆದರೆ ಈಗ ನೇರವಾಗಿ ತಮ್ಮ ಸಮಸ್ಯೆಗಳನ್ನು, ಸಲಹೆಗಳನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಳ್ಳಲು ಮೈಆಪರೇಟರ್ ಸಂಸ್ಥೆ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಜನರನ್ನು ತಲುಪುವುದಕ್ಕಾಗಿ ದೂರವಾಣಿ ಕರೆ ಮೂಲಕ ವ್ಯಕ್ತಿರೊಬ್ಬರು ತಮ್ಮ ಅಭಿಪ್ರಾಯ, ಸಲಹೆ, ಸಮಸ್ಯೆಗಳನ್ನು ರೆಕಾರ್ಡ್ ಮಾಡುವ ಅವಕಾಶ ನೀಡಲಾಗಿದೆ ಎಂದು ಮೈಆಪರೇಟರ್ ತಿಳಿಸಿದೆ.
Advertisement